ಮನರಂಜನೆ

‘ಎಣ್ಣೆ ಮೇಲಾಣೆ ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ’: ಸಖತ್ ಸೌಂಡ್ ಮಾಡ್ತಿದೆ ನವೀನ್ ಸಜ್ಜು ಹಾಡು

ಬೆಂಗಳೂರು,ಡಿ.31-ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ರಚಿಸಿ, ನಿರ್ದೇಶಿಸಿರುವ ‘ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ…’ ಹಾಡು ಸಖತ್ ಸದ್ದು ಮಾಡುತ್ತಿದೆ.

ಹೊಸ ವರ್ಷಕ್ಕೆ ಮತ್ತಷ್ಟು ಕಿಕ್​ ಕೊಡಲು ನವೀನ್ ಸಜ್ಜು ಅವರ ಎಣ್ಣೆ ಸಾಂಗ್​ ರಿಲೀಸ್ ಆಗಿದೆ. ಈ ಹಾಡನ್ನು ಬಿಗ್​ ಬಾಸ್ ವೇದಿಕೆಯ ಮೇಲೆ ಕಿಚ್ಚ ಸುದೀಪ್​ ರಿಲೀಸ್​ ಮಾಡಿದ್ದಾರೆ. ಸದ್ಯ ಹಾಡು ಯೂಟ್ಯೂಬ್ ನಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡು ಟ್ರೆಂಡಿಂಗ್ ನಲ್ಲಿದೆ. ಅಲ್ಲದೆ, ಒಳ್ಳೆಯ ಪ್ರತಿಕ್ರಿಯೆಗಳು ಹಾಡಿನ ಬಗ್ಗೆ ಕೇಳಿಬರುತ್ತಿದೆ.

ಹಾಡಿನಲ್ಲಿ ನವೀನ್ ಸಜ್ಜು ಕುಣಿದು ಕುಪ್ಪಳಿಸಿದ್ದಾರೆ. ಪಾರ್ಟಿ ಮೂಡ್ ನಲ್ಲಿ ಇರುವ ಈ ಹಾಡು ಹೊಸ ವರ್ಷದ ಪಾರ್ಟಿಗಳಲ್ಲಿ ಸದ್ದು ಮಾಡುವುದಲ್ಲದೆ, ಕುಡುಕರ ಸುಪ್ರಭಾತ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಳೆದ ವರ್ಷ ಬಿಗ್ ಬಾಸ್ ಮನೆಯಲ್ಲಿ ನವೀನ್ ಸಜ್ಜು ಈ ಹಾಡನ್ನು ರಚಿಸಿದ್ದರು. ಈ ಹಾಡನ್ನು ಭಾನುವಾರ ರಾತ್ರಿ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಬಿಡುಗಡೆ ಮಾಡಿದ್ದಾರೆ.

‘ಕನಕ’ ಚಿತ್ರದಲ್ಲಿ ನವೀನ್ ಸಜ್ಜು ಹಾಡಿದ್ದ ‘ಎಣ್ಣೆ ನಮ್ದು, ಊಟ ನಿಮ್ದು’ ಹಾಡು ಸೂಪರ್ ಹಿಟ್ ಆಗಿತ್ತು. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಬಡ್ಡಿ ಮಗನ್ ಲೈಫು’ ಚಿತ್ರದ ಹಾಡು ‘ಏನ್ ಚಂದಾನೊ ತಕೊ’ ಹಾಡು ಕೂಡ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ‘ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ…’ ಸದ್ದು ಮಾಡುತ್ತಿದೆ. (ಎಂ.ಎನ್)

Leave a Reply

comments

Related Articles

error: