ಮೈಸೂರು

ದಸರಾ ಸಿದ್ಧತೆಗಾಗಿ ನಾಲ್ಕು ದಿನ ಅರಮನೆ ಪ್ರವೇಶ ನಿರ್ಬಂಧ

ಒಡೆಯರ್ ವಂಶ ದಸರಾ ಸಿದ್ದತೆಗಾಗಿ ಅರಮನೆಯಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ನಡೆಸುವ ಸಲುವಾಗಿ ಸ್ವಲ್ಪ ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧ ಹಾಕಲಾಗಿದೆ. ಸೆ.25 ರ ಭಾನುವಾರ ಜಿಲ್ಲಾಡಳಿತವು ರಾಜವಂಶಸ್ಥರಿಗೆ ಸಿಂಹಾಸನವನ್ನು ಹಸ್ತಾಂತರಿಸಿ ಜೋಡಿಸುವ ಕಾರಣದಿಂದ ಮ. 1.30 ರವರೆಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸಿತ್ತು.

ಅರಮನೆಯ ಪ್ರವೇಶ ನಿರ್ಬಂಧ ಮಾಡಲಾಗಿದುದರ ಬಗ್ಗೆ ಗೊತ್ತಿಲ್ಲದ ಪ್ರವಾಸಿಗರು ಅರಮನೆ ವೀಕ್ಷಣೆಗಾಗಿ ಬಂದು ನಿರಾಶರಾಗಿ ವಾಪಸ್ಸು ಹೋದರು. ಟಿಕೆಟ್ ಕೌಂಟರಿನ ಬಳಿಯಿರುವ ಗೇಟಿನ ಬಳಿ ಅರಮನೆಗೆ ಪ್ರವೇಶವಿಲ್ಲ ಎಂದು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಬೋರ್ಡ್ ಹಾಕಲಾಗಿತ್ತು.

ಇದಲ್ಲದೇ ನಾಲ್ಕು ದಿನಗಳ ಕಾಲ ಅರಮನೆಯ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಅ.1 ರಂದು ಬೆ. 10.30ರಿಂದ ಮ.2.30 ರವರೆಗೆ  ಯದುವೀರ್ ಕೃಷ್ಣರಾಜ ಒಡೆಯರ್ ರವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಅ.10 ರಂದು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ 1.30 ರ ವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅ.11 ರಂದು ಜಂಬೂ ಸವಾರಿ ಇರುವುದರಿಂದ ಇಡೀ ದಿನ ಅರಮನೆ ಪ್ರವೇಶ ಇರುವುದಿಲ್ಲ. ಅ.20 ರಂದು ಸಿಂಹಾಸನವನ್ನು 16 ಭಾಗಗಳಾಗಿ ಬೇರ್ಪಡಿಸಿ ಜಿಲ್ಲಾಡಳಿತದ ವಶಕ್ಕೆ ನೀಡಲಾಗುತ್ತದೆ. ಅಂದು ಮ.1.30 ರ ತನಕ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ.

Leave a Reply

comments

Tags

Related Articles

error: