ಮೈಸೂರು

ಹೊಸ ವರ್ಷಾಚರಣೆ ಹಿನ್ನೆಲೆ ಸಾಂಸ್ಕೃತಿಕ ನಗರಿಯಲ್ಲಿ ಕೇಕ್‌ ಮಾರಾಟ ಭರಾಟೆ ಜೋರು

ಮೈಸೂರು,ಡಿ.31:-  ಹೊಸ ವರ್ಷಾಚರಣೆ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ನಗರ, ಪಟ್ಟಣಗಳ ಬೇಕರಿಗಳಲ್ಲಿ ಕೇಕ್‌ ಮಾರಾಟ ಭರಾಟೆ ಜೋರಾಗಿತ್ತು.

ಕುಟುಂಬ ಸದಸ್ಯರು, ಸ್ನೇಹಿತರು ಬೇಕರಿಗಳಿಗೆ ಮೊದಲೇ ತೆರಳಿ ವಿವಿಧ ಬಗೆಯ ಕೇಕ್‌ಗಳ ಸಿದ್ಧಪಡಿಸಲು ಬೇಡಿಕೆ ಸಲ್ಲಿಸಿದ್ದಾರೆ. ಬೇಕರಿಗಳು ಹೊಸ ವರ್ಷಾಚರಣೆಗೆ ಸಿಂಗಾರಗೊಂಡಿದ್ದವು.  ಬಣ್ಣ ಬಣ್ಣದ ಬಲೂನು, ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡು ಗ್ರಾಹಕರನ್ನು ಕೈಬಿಸಿ ಕರೆಯುತ್ತಿವೆ.

ಎಗ್‌ಲೆಸ್‌ ಕೇಕ್‌, ಪೈನಾಪಲ್‌, ಸ್ಟ್ರಾಬೆರಿ ಪೇಸ್ಟ್ರೀ, ಕಪ್‌ ಕೇಕ್‌ಗಳಿಗೂ ಈ ಬಾರಿ ಬೇಡಿಕೆ ಇದೆ. ಕೆಲವರು ಬ್ಲ್ಯಾಕ್‌ ಫಾರೆಸ್ಟ್‌, ಐರಿಶ್‌ ಕಾಫಿಯಂತಹ ದುಬಾರಿ ಕೇಕ್‌ ಖರೀದಿಸುತ್ತಿದ್ದಾರೆ. ಪ್ರತಿ ಕೆಜಿಗೆ ಕೇಕ್‌ಗೆ 250 ರಿಂದ 500 ದರವಿದೆ. ಕೇಕ್‌ ಮಾತ್ರವಲ್ಲದೆ, ಹೊಸ ವರ್ಷ ಶುಭಾಶಯ ಕೋರುವ ಸ್ಟಿಕರ್‌, ಗ್ರಿಟಿಂಗ್ಸ್‌ಗಳ ಮಾರಾಟವೂ ನಡೆದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷಾಚರಣೆ ವೇಳೆ ಕೇಕ್‌ ವ್ಯಾಪಾರ ಭರ್ಜರಿಯಾಗಿದೆ.

ಯುವಕರು, ಮಕ್ಕಳು, ಮಹಿಳೆಯರು ತಮ್ಮ ವಯೋಮಾನದ ಗುಂಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿಕೊಂಡು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲು ಸನ್ನದ್ದರಾಗಿದ್ದಾರೆ.

ಹೊಸ ವರ್ಷದಕ್ಕೆ ಬೇಕಾದ ಸಾಮಾಗ್ರಿಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಅದೇ ರೀತಿಯಲ್ಲಿ ಅಲ್ಲಿ ಸಣ್ಣ ಪುಟ್ಟ ಪಾರ್ಟಿಗಳನ್ನು ಮಾಡಲು ಯುವ ಜನತೆ ಮುಂದಾಗಿದ್ದಾರೆ.

ಡಿ.31ರ ರಾತ್ರಿ ಹೊಸ ವರ್ಷಾಚರಣೆಗೆ ಮೈಸೂರು ಯುವಕರು ಸಜ್ಜಾಗುತ್ತಿದ್ದು, ಸಂಭ್ರಮಾಚರಣೆಗೆ ಪ್ರತಿಷ್ಠಿತ ಹೋಟೆಲ್‌, ದಾಬಾ, -ಫಾರ್ಮ ಹೌಸ್‌ಗಳತ್ತ ದೌಡಾಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹೊಸ ವರ್ಷಾಚರಣೆಯನ್ನು ಸ್ನೇಹಿತರ ಜತೆಗೂಡಿ ಆಚರಿಸಬೇಕು ಎನ್ನುವ ಇಚ್ಛೆ ಹೊಂದಿರುವ ಕೆಲ ಯುವಕರು ನಗರದ ದೊಡ್ಡ ಹೋಟೆಲ್‌ಗಳಲ್ಲಿಪಾರ್ಟಿ ಮಾಡಲು ನಿರ್ಧರಿಸಿದರೆ, ಇನ್ನು ಕೆಲವರು ಸ್ಟಾರ್‌ ಹೋಟೆಲ್‌ಗಳಲ್ಲಿ ನಡೆಯುವ ಮ್ಯೂಸಿಕ್‌ ಪಾರ್ಟಿಗಳಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ‌. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: