ಮೈಸೂರು

ಮಳೆನೀರಿನಿಂದ ರಸ್ತೆಗಳು ಜಲಾವೃತ

ಮೈಸೂರಿನ ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತಿರುಗಾಡಲು ತೊಂದರೆಯಾಗಿದೆ.

ವಾಯುಭಾರ ಕುಸಿತದಿಂದ ಬಿದ್ದ ಮಳೆಯಿಂದಾಗಿ ರಸ್ತೆಯೆಲ್ಲ ನೀರುಮಯವಾಗಿದೆ. ಇದರಿಂದ ಜನರು ತಿರುಗಾಡಲು ಸಹ ಕಷ್ಟವಾಗಿದೆ.

ಸ್ಥಳೀಯರು ಇಲ್ಲಿನ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಳೆದ ಹಲವು ವರ್ಷಗಳಿಂದ ಈ ರಸ್ತೆ ರಿಪೇರಿಯೇ ಆಗಿಲ್ಲ. ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಕೂಡ ತಲೆ‌ಕೆಡಿಸಿಕೊಂಡಿಲ್ಲ. ಇದರಿಂದ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ನಿಂತಲ್ಲಿಯೇ‌ ನಿಂತು ಜನರಿಗೆ ಸಮಸ್ಯೆಯಾಗಿದೆ ಎಂದು ಸಿಟಿಟುಡೇಗೆ ಮಾಹಿತಿ ನೀಡಿದ್ದಾರೆ.

Leave a Reply

comments

Related Articles

error: