ಪ್ರಮುಖ ಸುದ್ದಿ

ಹುತಾತ್ಮರಿಗೆ ಗೌರವ ಸಲ್ಲಿಸಿದ ಭೂ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ : ಪಾಕಿಸ್ತಾನದ ತಂತ್ರಗಳು ಹೆಚ್ಚು ಕಾಲ ಉಳಿಯುವುದಿಲ್ಲ

ದೇಶ(ನವದೆಹಲಿ)ಜ.1:- ಹುತಾತ್ಮರಿಗೆ ಗೌರವ ಸಲ್ಲಿಸಲು ಭೂ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಬುಧವಾರ ಬೆಳಿಗ್ಗೆ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪಿದರು.

ಮಂಗಳವಾರ ಅವರು ಸೇನೆಯ 28 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ಹುತಾತ್ಮರ ಸ್ಮಾರಕ ತಲುಪಿದ ವೇಳೆ ಅವರಿಗೆ ಗೌರವ ವಂದನೆ ನೀಡಲಾಯಿತು. ಇದೇ ವೇಳೆ ಮಾತನಾಡಿ ಭಯೋತ್ಪಾದನೆ ಕುರಿತ ಪಾಕಿಸ್ತಾನದ ತಂತ್ರಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ವಾಹೆ ಗುರೂಜಿ ಸೈನ್ಯದ ಮುಖ್ಯಸ್ಥನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ನನಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸುತ್ತೇನೆ. ಈ ಮೂರು ಸೇವೆಗಳು ದೇಶವನ್ನು ರಕ್ಷಿಸಲು ಸಿದ್ಧವಾಗಿವೆ. ಎಲ್ಲಾ ಸಮಯದಲ್ಲೂ ಕಾರ್ಯರೂಪಕ್ಕೆ ಸಿದ್ಧವಾಗುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಮಾನವ ಹಕ್ಕುಗಳ ಗೌರವಕ್ಕೆ ನಾವು ವಿಶೇಷ ಗಮನ ಹರಿಸುತ್ತೇವೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: