ಮೈಸೂರು

ಉಪಮೇಯರ್ ಟಿ.ದೇವರಾಜುಗೆ ಶ್ರದ್ದಾಂಜಲಿ

ಇತ್ತೀಚೆಗೆ ನಿಧನರಾದ ಮಾಜಿ ಉಪಮೇಯರ್ ಟಿ.ದೇವರಾಜು ಅವರಿಗೆ ಟಿ.ದೇವರಾಜು ಸ್ನೇಹ ಬಳಗದ ವತಿಯಿಂದ ನಗರದ ಮೇದರ್‍ಕೇರಿಯ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಂಗಳವಾರ ನಡೆದ ಸಮಾರಂಭದಲ್ಲಿ ಅಗಲಿದ ತಮ್ಮ ನೆಚ್ಚಿನ ನಾಯಕನಿಗೆ ಪಾಲಿಕೆ ಸದಸ್ಯರು, ಸ್ನೇಹಿತರು, ಮೇದರ್‍ಕೇರಿಯ ನಿವಾಸಿಗಳು ನುಡಿ ನಮ್ಮನ ಸಲ್ಲಿಸಿದರು.

ಈ ವೇಳೆ ದೇವರಾಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮಾಜಿ ಮೇಯರ್ ಆರ್.ಲಿಂಗಪ್ಪ, ದೇವರಾಜು ಓರ್ವ ಸಮಾಜಮುಖಿ ನಾಯಕ. ಸದಾ ಜನಪರ ಚಿಂತನೆಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಮೂರು ಬಾರಿ ನಗರ ಪಾಲಿಕೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು. ಓರ್ವ ಜನಪ್ರತಿನಿಧಿಯಾಗಿ ಸದಾ ಸಾರ್ವಜನಿಕರಿಗೆ ಒಳಿತಾಗುವ ಕೆಲಸ ಮಾಡುತ್ತಿದ್ದರು. ಅವರ ಮಾತಿನ ಧ್ವನಿ ಜೋರಿದ್ದರು. ಮನಸ್ಸಿನಲ್ಲಿ ಮೃದು ಸ್ವಭಾವದ ವ್ಯಕ್ತಿ. ಯಾರನ್ನೂ ವೈಯಕ್ತಿಕವಾಗಿ ದ್ವೇಷ ಮಾಡುತ್ತಿರಲಿಲ್ಲ ಎಂದು ಹೇಳಿದರು. ತಮ್ಮ ಹೋರಾಟದ ಮೂಲಕವೇ ಮುಖ್ಯವಾಹಿನಿಗೆ ಬಂದ ಅವರು, ಉಪ ಮೇಯರ್ ಆಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದರು. ಗೋವುಗಳಿಗೆ ಕಡಿಮೆ ದರದಲ್ಲಿ ಹಣ ಕೊಡಬೇಕೆಂದು ಒತ್ತಾಯಿಸಿದ್ದರು. ಜಾ.ದಳ ಪಕ್ಷ ಸಂಘಟನೆಗೂ ಹೆಚ್ಚು ಸಮಯ ವಹಿಸಿದ್ದರು. ನೇರನುಡಿಯವರಾಗಿದ್ದ ಅವರು ಎಂದೂ ಯಾರಿಗೂ ಹೆದರುತ್ತಿರಲಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಲ್ಯಾಕ್ ಮಾಜಿ ಅಧ್ಯಕ್ಷ ಅನಂತು, ನಗರ ಪಾಲಿಕೆ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ, ನಗರ ಪಾಲಿಕೆ ಸದಸ್ಯರಾದ ನಾಗಭೂಷಣ್, ಬಾಲು, ನಟರಾಜ್, ಜಾ.ದಳ ಮಾಜಿ ನಗರಾಧ್ಯಕ್ಷ ರಾಜಣ್ಣ, ಸರ್ವಜನಾಂಗ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೇಣುಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: