ಮೈಸೂರು

 ಶ್ರೀ ವಿಶ್ವೇಶ್ವರ ತೀರ್ಥ ಶ್ರೀ ಪಾದಂಗಳವರ ಕೃಷ್ಣೈಕ್ಯ ಹಿನ್ನೆಲೆ : ಶ್ರೀಕೃಷ್ಣ ತುಳಸಿ ನಮನ ಕಾರ್ಯಕ್ರಮ, ಶ್ರದ್ದಾಂಜಲಿ ಸಭೆ

ಮೈಸೂರು,ಜ.1:- ಶ್ರೀಮಹಾಜನ ಸಭಾ (ರಿ) ವತಿಯಿಂದ  ಕೃಷ್ಣಮೂರ್ತಿ ಪುರಂ ನಲ್ಲಿರುವ ಶ್ರೀ ರಾಮಮಂದಿರದಲ್ಲಿಂದು ವಿಶ್ವಸಂತ  ಪೇಜಾವರ ಮಠಾಧೀಶರಾದ   ಶ್ರೀ ವಿಶ್ವೇಶ್ವರ ತೀರ್ಥ ಶ್ರೀ ಪಾದಂಗಳವರ ಭಾವಚಿತ್ರಕ್ಕೆ ತುಳಸಿ ಹಾರ ಹಾಕುವ ಮೂಲಕ  ಶ್ರೀಕೃಷ್ಣ ತುಳಸಿ ನಮನ ಕಾರ್ಯಕ್ರಮ, ಶ್ರದ್ದಾಂಜಲಿ ಸಭೆಯನ್ನು  ಆಯೋಜಿಸಲಾಗಿತ್ತು.

ನಂತರ  ಮಾತನಾಡಿದ ಹಿರಿಯ ಸಮಾಜ ಸೇವಕರಾದ ಡಾ.ಕೆ ರಘುರಾಂ ವಾಜಪೇಯಿ  ಪೇಜಾವರ ಶ್ರೀಗಳಿಗೆ ಭಾರತರತ್ನ ಪುರಸ್ಕಾರ ನೀಡಿ ಹಾಗೆಯೇ ಮೈಸೂರಿನಲ್ಲಿರುವ ಫೈರ್ ಬ್ರಿಗೇಡ್ ರಸ್ತೆಗೆ ಶ್ರೀಗಳ ಹೆಸರು ನಾಮಕರಣ ಮಾಡಿ  ಎಂದು  ಒತ್ತಾಯಿಸಿದರು. ಸನಾತನ ಹಿಂದೂ  ಧರ್ಮದ ಸರ್ವೇ  ಜನಃ  ಸುಖಿನೋ ಭವಂತು ಎಂಬ ಘೋಷವಾಕ್ಯ ದಂತೆ ಎಲ್ಲಾ ಸಮುದಾಯದ ಜನ ಸುಖದಿಂದ ಬಾಳುವಂತೆ ಎಲ್ಲರಲ್ಲೂ ದೇವರನ್ನು ಕಾಣುವ ಮಾನವ ಪ್ರೀತಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರದ್ದು. ಮಾನವ ರತ್ನ ಈ ದೇಶ ಕಂಡ ಅಪ್ರತಿಮ ಸಂತನಿಗೆ ಭಾರತರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದರು.

ಮಧ್ವಶಾಸ್ತ್ರ ಓದಿದ ಯಾರೇ ಮಠಕ್ಕೆ ಬಂದರೆ ಅಂತಹ ಪಂಡಿತರ ಪಾದಪೂಜೆ ಮಾಡಿಸಿ ಅವರಿಗೆ ಕೈತುಂಬಾ ದಕ್ಷಿಣೆ ಕೊಟ್ಟು ಸತ್ಕರಿಸುವ ಪೇಜಾವರರ ದೊಡ್ಡ ಗುಣ ಮರೆಯಲಾಗದು. ಪೇಜಾವರರು ನಿತ್ಯ ರಾಮ ವಿಠಲನ ಪೂಜಿಸುತ್ತಿದ್ದರು.  ಮಾನವ ಪ್ರೀತಿ ಎಲ್ಲರಿಗೂ ಹಂಚಿದವರಿಗೆ ಭಾರತರತ್ನ ಪುರಸ್ಕಾರ ನೀಡಬೇಕು ಅದಕ್ಕಾಗಿ ಒಕ್ಕೊರಲ ಆಗ್ರಹ ಕೇಳಿ ಬರಬೇಕು ಎಂದರು

ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ .ಪ್ರಕಾಶ್ ‘ಪೇಜಾವರ ಸ್ವಾಮೀಜಿ ಎಲ್ಲರ ಪ್ರೀತಿ ಪಡೆದಿದ್ದರು’‘ಪೇಜಾವರ ಸ್ವಾಮೀಜಿ ಯಾವುದೇ ಜಾತಿಗೆ ಸೀಮಿತ ಸ್ವಾಮೀಜಿ ಎನಿಸದೇ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದವರು.‘ಯತಿಗಳು ಸಾಮರಸ್ಯ ನಡಿಗೆ ಮೂಲಕ ಸಮಾಜದ ಒಗ್ಗಟ್ಟಿಗೆ ಶ್ರಮಿಸುವ ಕೆಲಸವನ್ನು ಮಾಡುವ ಜತೆಗೆ ಪ್ರಕೃತಿ ಸಂಕಷ್ಟ ಸಂದರ್ಭದಲ್ಲಿ ಅವರ ಸೇವೆಗೆ ಸದಾ ಸಿದ್ಧರಾಗಿ ಪಾದಯಾತ್ರೆ ನಡೆಸಿ ಜನರ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದರು. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಸೂಕ್ತ ಪರಿಹಾರ ಕೊಡುವ ಶಕ್ತಿ ಹೊಂದಿದ್ದರು’ ಎಂದು ಬಣ್ಣಿಸಿದರು.

ಸಂತಾಪ  ಸಭೆಯಲ್ಲಿ ಸುಂದರೇಶನ್, ಜಿ ಆರ್ ನಾಗರಾಜ್, ವೆಂಕಟ್ರಾಮ್ ಕಶ್ಯಪ್, ವಿಕ್ರಮ್ ಅಯ್ಯಂಗಾರ್, ಅಪೂರ್ವ ಸುರೇಶ್, ಕಡಕೊಳ ಜಗದೀಶ್, ಶ್ರೀ ಕೃಷ್ಣಮೂರ್ತಿಪುರಂ ರಾಮ ಮಂದಿರದ ಕಾರ್ಯದರ್ಶಿ ಮಾಧುರಾವ್, ನಿರ್ದೇಶಕರುಗಳಾದ ವಿಎನ್ ಕೃಷ್ಣ, ಶೇಷಾದ್ರಿ ,ಬ್ರಹ್ಮಣ್ಯತೀರ್ಥ ,ಶೇಷಾದ್ರಿ,ಅಗಸ್ತ್ಯ  ಕೋಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಸಿವಿ ಪಾರ್ಥಸಾರಥಿ,  ಗಣೇಶ್ ಪ್ರಸಾದ್, ಮುಳ್ಳೂರು ಸುರೇಶ್, ರಾಧಾಕೃಷ್ಣ ,ಹರಿಹರಪುರ ಮಠದ ಶ್ರೀನಿವಾಸ್  ಮತ್ತಿತರರು  ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: