ಕ್ರೀಡೆ

ಭಾರತ ವಿರುದ್ಧದ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ

ಕೊಲಂಬೊ,ಜ.2-ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಪ್ರವಾಸಿ ಶ್ರೀಲಂಕಾ ತಂಡ ಪ್ರಕಟಗೊಂಡಿದೆ. ಅನುಭವಿ ಸ್ಟಾರ್‌ ಆಲ್‌ರೌಂಡರ್‌ ಏಂಜಲೊ ಮ್ಯಾಥ್ಯೂಸ್‌ ಮರಳಿ ಸ್ಥಾನ ಪಡೆದಿದ್ದಾರೆ.

ಇದೇ ವೇಳೆ ಅಭ್ಯಾಸ ಸಂದರ್ಭದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ವೇಗದ ಬೌಲರ್‌ ನುವಾನ್‌ ಪ್ರದೀಪ್‌ ಭಾರತ ಪ್ರವಾಸದಿಂದ ಹೊರಗುಳಿದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಗಾಯದ ಸಮಸ್ಯೆ ಮತ್ತು ಕಳೆಪೆ ಫಾರ್ಮ್‌ ಸಮಸ್ಯೆ ಎದುರಿಸಿದ್ದ ಶ್ರೀಲಂಕಾ ತಂಡದ ಮಾಜಿ ನಾಯಕ ಏಂಜಲೊ ಮ್ಯಾಥ್ಯೂಸ್‌ 2018ರ ಆಗಸ್ಟ್‌ ಬಳಿಕ ಯಾವುದೇ ಟಿ20-ಐ ಕ್ರಿಕೆಟ್‌ ಪಂದ್ಯವನ್ನಾಡಿಲ್ಲ. ಇದೀಗ ಮರಳಿ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಜ.5ರಂದು ಆರಂಭವಾಗಲಿರುವ 3 ಪಂದ್ಯಗಳ ಸರಣಿಯಲ್ಲಿ ಅನುಭವಿ ವೇಗಿ ಲಸಿತ್‌ ಮಾಲಿಂಗ ಲಂಕಾ ಪಡೆಯನ್ನು ಮುನ್ನಡೆಸಲಿದ್ದಾರೆ. ಭಾರತ ತಂಡ ಶ್ರೀಲಂಕಾ ವಿರುದ್ಧದ ಸರಣಿ ಬಳಿಕ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನಾಡಲಿದೆ.

ಜ.15ರಂದು ಆಸ್ಟ್ರೇಲಿಯಾ ವಿರುದ್ಧದ ಸರಣಿ ಶುರುವಾಗಲಿದೆ. ಇದೇ ವೇಳೆ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಮತ್ತು ಅನುಭವಿ ವೇಗಿ ಮೊಹಮ್ಮದ್‌ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದ ಜಸ್‌ಪ್ರೀತ್‌ ಬುಮ್ರಾ ಈ ಸರಣಿ ಮೂಲಕ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲಿದ್ದಾರೆ.

ಶ್ರೀಲಂಕಾ ತಂಡ: ಲಸಿತ್‌ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜಲೊ ಮ್ಯಾಥ್ಯೂಸ್, ದಸುನ್‌ ಶನಕ, ಖುಶಲ್‌ ಪೆರೆರಾ, ನಿರೋಶನ್‌ ಡಿಕ್ವೆಲ್ಲಾ, ಧನಂಜಯ ಡಿ’ಸಿಲ್ವಾ, ಇಸುರು ಉದನಾ, ಭಾನುಕ ರಾಜಪಕ್ಷ, ಒಶಾದ ಫರ್ನಾಂಡೊ, ವಾನಿಂದು ಹಸರಂಗ, ಲಾಹಿರು ಕುಮಾರ, ಕುಶಲ್‌ ಮೆಂಡಿಸ್‌, ಲಕ್ಷಣ್‌ ಸಂದಕನ್‌, ಕಸುನ್‌ ರಜಿತ.

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಶಿವಂ ದುಬೇ, ಯುಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ನವದೀಪ್‌ ಸೈನಿ, ಶಾರ್ದುಲ್‌ ಠಾಕೂರ್‌, ಮನೀಶ್‌ ಪಾಂಡೆ, ವಾಷಿಂಗ್ಟನ್‌ ಸುಂದರ್‌, ಸಂಜು ಸ್ಯಾಮ್ಸನ್‌. (ಎಂ.ಎನ್)

Leave a Reply

comments

Related Articles

error: