ಕ್ರೀಡೆಮೈಸೂರು

ನಾಳೆಯಿಂದ ದಮನ್, ದಿಯುನಲ್ಲಿ ಅಂಡರ್ 17 ರಾಷ್ಟ್ರಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾವಳಿ: ಮೈಸೂರಿನ ನಾಲ್ವರು ಆಟಗಾರರು ಭಾಗಿ

ಮೈಸೂರು,ಡಿ.ಜ.2-65ನೇ ರಾಷ್ಟ್ರಮಟ್ಟದ 17 ವರ್ಷದೊಳಗಿನ ಬಾಲಕರ ಕ್ರಿಕೆಟ್ ಪಂದ್ಯಾವಳಿ ನಾಳೆಯಿಂದ (ಜ. 3) ಜ.8ರವರೆಗೆ ದಮನ್ ಮತ್ತು ದಿಯುನಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವೂ ಭಾಗವಹಿಸುತ್ತಿದೆ.

ಈಗಾಗಲೇ ಕರ್ನಾಟಕ ರಾಜ್ಯ ತಂಡದ 16 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲು ದಮನ್ ಮತ್ತು ದಿಯುಗೆ ತೆರಳಿದ್ದಾರೆ. ಪಂದ್ಯಾವಳಿಯಲ್ಲಿ ಮೈಸೂರಿನ ನಾಲ್ವರು ಹಾಗೂ ಮಂಡ್ಯದಿಂದ ಓರ್ವ ಆಟಗಾರ ಭಾಗವಹಿಸುತ್ತಿದ್ದಾರೆ.

ಪಂದ್ಯಾವಳಿಯಲ್ಲಿ ಮೈಸೂರಿನಿಂದ ಐಡಿಯಲ್ ಜಾವಾ ರೋಟರಿ ಶಾಲೆಯ ಎಚ್.ಎನ್.ಪವನ್, ಮರಿಮಲ್ಲಪ್ಪ ಪ್ರೌಢಶಾಲೆಯ ಲಿಖಿತ್ ಎಸ್.ಗೌಡ, ಸಿದ್ದಾರ್ಥನಗರದ ಜಿಎಸ್ಎಸ್ಎಸ್ ಬಂಟ್ವಾಳ್ ಮಾಧವ ಶೆಣೈ ಪ್ರೌಢಶಾಲೆಯ ಎಸ್.ಯದುನಂದನ್, ವಿಜಯ ವಿಠಲ ಪ್ರೌಢಶಾಲೆಯ ಎಂ.ಎಸ್.ಯಶವಂತ್, ಮಂಡ್ಯದ ಅಭಿನವ್ ಭಾರತಿ ವಿದ್ಯಾಕೇಂದ್ರ ಪ್ರೌಢಶಾಲೆಯ ಎಂ.ಕೆ.ಯಶವಂತ್ ಭಾಗವಹಿಸುತ್ತಿದ್ದಾರೆ.

ದೈಹಿಕ ಶಿಕ್ಷಣ ಇಲಾಖೆ ತಂಡದ ಮ್ಯಾನೇಜರ್ ಆಗಿ ಕಲಬುರಗಿಯ ಎನ್ ವಿಎಸ್ ಬಾಲಕರ ಪ್ರೌಢ ಶಾಲೆಯ ಸಂತೋಷ್ ಕುಮಾರ್ ಕೋಬಲ್, ತರಬೇತುದಾರರಾಗಿ ರಾಯಚೂರು ಜಿಲ್ಲೆಯ ಲಿಂಗಸಗೂರು ಇಂಡಿಯನ್ ಪಬ್ಲಿಕ್ ಸ್ಕೂಲ್ ನ ಅಹ್ಮದ್ ಅವರನ್ನು ನೇಮಿಸಿದೆ. (ಎಚ್.ಎನ್,ಎಂ.ಎನ್)

Leave a Reply

comments

Related Articles

error: