ಕರ್ನಾಟಕಪ್ರಮುಖ ಸುದ್ದಿ

ಸಿದ್ಧಗಂಗಾ ಮಠಕ್ಕೆ ಬಂದಾಗ ಶೂನ್ಯ ಭಾವ ಆವರಿಸಿತು: ಪ್ರಧಾನಿ ಮೋದಿ

ತುಮಕೂರು,ಜ.2-ಸಿದ್ಧಗಂಗಾ ಮಠಕ್ಕೆ ಬಂದಾಗ ನನ್ನನ್ನು ಶೂನ್ಯ ಭಾವ ಆವರಿಸಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಇಂದು ತುಮಕೂರಿಗೆ ಆಗಮಿಸಿರುವ ಮೋದಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದರು. ಬಳಿಕ ಡಾ.ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮತ್ತು ಮಠದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಟ್ಟು ಮಾತನಾಡಿದ ಅವರು, ಶ್ರೀ ಶಿವಕುಮಾರ ಸ್ವಾಮೀಜಿಗಳು ಇಲ್ಲದ ಹಿನ್ನೆಲೆಯಲ್ಲಿ ಶೂನ್ಯ ಭಾವ ಕಾಡುತ್ತಿದೆ. ಪೂಜ್ಯ ಶ್ರೀಗಳ ಭೌತಿಕ ಅನುಪಸ್ಥಿತಿ ಕಾಡುತ್ತಿದೆ ಎಂದು ಹೇಳಿದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಹೇಳುವ ಮೂಲಕ ಭಾಷಣ ಆರಂಭಿಸಿದ ಮೋದಿ, ನನಗೆ ತುಮಕೂರಿಗೆ ಬಂದಿದ್ದು ಖುಷಿಯಾಗಿದೆ. ಪೂಜ್ಯ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಶಿಲಾನ್ಯಾಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. 2020ರ ಹೊಸ ವರ್ಷದ ಮೊದಲ ಕೆಲಸವನ್ನು ತುಮಕೂರಿಗೆ ಬಂದ ನಂತರವೇ ಕೆಲಸ ಆರಂಭಿಸುತ್ತಿದ್ದೇನೆ ಎಂದರು.

ಪೂಜ್ಯ ಶಿವಕುಮಾರ ಶ್ರೀಗಳ ಪ್ರೇರಣಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ನಾವು ಕೆಲವು ದಿನಗಳ ಹಿಂದೆ ಕರ್ನಾಟಕದ ಇನ್ನೊಬ್ಬರು ಶ್ರೀಗಳಾದ ಪೇಜಾವರ ಶ್ರೀಗಳನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದ ಶೂನ್ಯ ಆವರಿಸಿದೆ ಎಂದು ಹೇಳಿದರು.

ಡಾ.ಶಿವಕುಮಾರ ಸ್ವಾಮೀಜಿ ಅವರು ಸಾವಿರಾರು ಮಂದಿ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿದ್ದಾರೆ. ಜಾತಿಯನ್ನು ನೋಡದೆ ಮಠದಲ್ಲಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿದ್ದಾರೆ. ಮಠದಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಲಿ ಇದ್ದ 370ನೇ ವಿದಿಯನ್ನು ರದ್ದುಗೊಳಿಸಿ ಅಲ್ಲಿ ಅಭಿವೃದ್ಧಿಯನ್ನು ಜಾರಿಗೊಳಿಸಿದ್ದೇವೆ. ಜಮ್ಮು-ಕಾಶ್ಮೀರದ ವಿಕಾಸಕ್ಕೆ ನಾಂದಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತಡೆ ಇಲ್ಲದೆ ನಡೆಯಲಿದೆ. ದಬ್ಬಾಳಿಕೆಗೆ ಗುರಿಯಾದವರ ರಕ್ಷಣೆಗೆ ಕಾನೂನು ಜಾರಿಗೆ ತಂದಿದ್ದೇವೆ. ರಾಷ್ಟ್ರದಲ್ಲಿ 2014ರಿಂದ ಬದಲಾವಣೆಯ ಪರ್ವವೇ ಆರಂಭವಾಗಿದೆ. ಇದಕ್ಕೆ ಭಾರತೀಯರು ನನಗೆ ನೀಡಿದ ಬೆಂಬಲ ಕಾರಣ ಎಂದು ಹೇಳಿದರು. (ಎಂ.ಎನ್)

Leave a Reply

comments

Related Articles

error: