ಕರ್ನಾಟಕ

ಶಿವಮೊಗ್ಗ: ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಶಿವಮೊಗ್ಗ,ಜ.3-ಕೊಳೆತ ಸ್ಥಿತಿಯಲ್ಲಿ ಕಾರಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಶಿವಮೊಗ್ಗದ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಡಿ.22ರಿಂದ ಮಾರುತಿ ಓಮ್ನಿ ಕಾರೊಂದು ನಿಂತಿತ್ತು. ಈ ಕಾರಿನಿಂದ ಗಬ್ಬುವಾಸನೆ ಬರುತ್ತಿತ್ತು. ಪೊಲೀಸರು ತಪಾಸಣೆ ನಡೆಸಿದಾಗ ಕಾರಿನಲ್ಲಿ ಪ್ಲಾಸ್ಟಿಕ್​ ಕವರ್​ನಲ್ಲಿ ಸುತ್ತಿಡಲಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರೈಲ್ವೆ ನಿಲ್ದಾಣದ ಹೊರಗಡೆ ಕಾರನ್ನು ಸುತ್ತಮುತ್ತಲಿನವರು ಅಥವಾ ಪ್ರಯಾಣಿಕರು ನಿಲ್ಲಿಸಿರಬಹುದೆಂದು ಯಾರೂ ಹೆಚ್ಚಾಗಿ ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ರೈಲ್ವೆ ಸ್ಟೇಷನ್ ನ ಪಾರ್ಕಿಂಗ್ ಜಾಗದ ಸೆಕ್ಯುರಿಟಿಗೆ ಕೆಲವು ದಿನಗಳಿಂದ ಕೊಳೆತ ವಾಸನೆ ಬರುತ್ತಿದ್ದುದರಿಂದ ಸುತ್ತಮುತ್ತಲ ಜಾಗದಲ್ಲಿ ಯಾವುದಾದರೂ ಪ್ರಾಣಿ ಸತ್ತಿದೆಯೇ? ಎಂದು ಹುಡುಕಲಾಗಿತ್ತು. ಆದರೆ, ಏನೂ ಪತ್ತೆಯಾಗಿರಲಿಲ್ಲ. 2 ದಿನಗಳಿಂದ ಕಾರಿನ ಕಡೆಯಿಂದ ಕೊಳೆತ ವಾಸನೆ ಹೆಚ್ಚಾಗಿ ಬರುತ್ತಿದ್ದುದರಿಂದ ಅನುಮಾನಗೊಂಡ ಪಾರ್ಕಿಂಗ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದರು.

ರೈಲ್ವೆ ನಿಲ್ದಾಣದ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿದ್ದರು. ಲಾಕ್ ಆಗಿದ್ದ ಕಾರಿನ ಲಾಕ್ ತೆಗೆಸಿ ಒಳಗೆ ನೋಡಿದಾಗ ಪ್ಲಾಸ್ಟಿಕ್​ ಕವರ್​ನಲ್ಲಿ ಸುತ್ತಿಡಲಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಕಾರು ಯಾರದ್ದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: