ಮೈಸೂರು

ಹಿರಿಯ ಮಹಿಳಾ ವಕೀಲರಿಗೆ ಸನ್ಮಾನ

ಮಹಿಳಾ ದಿನಾಚರಣೆ ಮಾರ್ಚ್ 8 ಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಆಚರಿಸಬೇಕು ಎಂದು ಮೈಸೂರು ವಿವಿಯ ನಿವೃತ್ತ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಆರ್. ಇಂದಿರಾ ಅವರು ಹೇಳಿದರು.

ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ವತಿಯಿಂದ ಬುಧವಾರ ನಗರದ ಪತ್ರಕರ್ತ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಿರಿಯ ಮಹಿಳಾ ವಕೀಲರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಗ ಕಾಲ ಮೊದಲಿನಂತಿಲ್ಲ, ಬದಲಾಗಿದೆ. ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಕಾನೂನುಗಳು ಬಿಗಿಯಾಗುತ್ತಿವೆ. ಆದರೂ ಸಹ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

2017 ನೇ ವರ್ಷ ಮಹಿಳಾ ಹೋರಾಟಗಳಿಗೆ ಪ್ರಮುಖವಾದ ಕಾಲಘಟ್ಟ. ಪತ್ರಿಕೋದ್ಯಮ ಮತ್ತು ಕಾನೂನು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಜನಾಭಿಪ್ರಾಯ ಮತ್ತು ಮಹಿಳೆಯರ ಚಿಂತನೆಗಳನ್ನು ಸಮಾಜಕ್ಕೆ ತಿಳಿಸಬೇಕು. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನತೆ ನೀಡಬೇಕು ಎಂದು ತಿಳಿಸಿದರು.

ಬಿ.ರಾಧಾ, ವಿ.ಮೈಥಿಲಿ, ಎಂ.ಎಸ್ ಸಾವಿತ್ರಿ, ಕೆ.ಎಲ್. ಸುಗಂಧಿ, ಮುತಮ್ಮ  ಇವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಅರ್ಪಿತಾ ಪ್ರತಾಪಸಿಂಹ, ಮೈಸೂರು ವಕೀಲರ ಸಂಘದ ಅಧ‍್ಯಕ್ಷ ಜಿ.ವಿ.ರಾಮಮೂರ್ತಿ, ಹಿರಿಯ ವಕೀಲ ಎಸ್.ಲೋಕೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: