ಮೈಸೂರು

ಶೀಘ್ರವಾಗಿ ತಂತ್ರಜ್ಞಾನವನ್ನು ಕೊಂಡೊಯ್ಯುವುದು ಮುಖ್ಯ: ಸಿ.ಬಸವರಾಜು.

ಜಿಐಎಸ್ ಮತ್ತು ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಗಳು ದೇಶದ ಆರ್ಥಿಕ ಅಭಿವೃದ್ದಿಗೆ ಮತ್ತು ಪ್ರಗತಿಗೆ ಸಹಕಾರಿಯಾಗಿವೆ ಎಂದು ಮೈಸೂರ ವಿಶ್ವವಿದ್ಯಾನಿಲಯದ ಕುಲಸಚಿವ ಸಿ ಬಸವರಾಜು ಹೇಳಿದರು.

ಜಿಯೊ ಇನ್ಫಾರ್ಮೆಟಿಕ್ಸ್ ಟೆಕ್ನಾಲಜಿಯ ವತಿಯಿಂದ ಆಯೋಜಿಸಲಾಗಿದ್ದ ಜಿಐಎಸ್ ಮತ್ತು ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಗಳ ಉದ್ಘಾಟನೆಯ 3 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದು ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರಬೇಕಾಗಿರುವುದು ಪ್ರತಿಯೊಬ್ಬರಿಗೂ ಅಗತ್ಯವಿದೆ. ಭೌಗೋಳಿಕ ಮಾಹಿತಿ ವ್ಯವಸ್ಥೆ(ಜಿಐಎಸ್) ಪ್ರತಿಯೊಬ್ಬರಿಗೂ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಆಡಳಿತಕ್ಕೆ ಪುಷ್ಟಿ ನೀಡುತ್ತದೆ. ಜಿಐಎಸ್ ತುಂಬಾ ಸುಲಭದ ಸಾಪ್ಟ್ ವೇರ್ ಆಗಿದ್ದು, ಚಿತ್ರಗಳ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ. ಇಂದು ಆರ್ಥಿಕ ಮತ್ತು ಮಾನವ ಚಟುವಟಿಕೆಗಳಿಂದಾಗಿ ಪರಿಸರ ವಿರೂಪಗೊಳ್ಳುತ್ತಿದೆ. ಜಿಐಎಸ್ ಬಳಕೆಯಿಂದಾಗಿ ನಾವು ಹವಾಮಾನ ಬದಲಾವಣೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜಿಐಎಸ್ ನ ಸಹಾಯದಿಂದ ನೈಸರ್ಗಿಕ ಸಂಪನ್ಮೂಲಗಳು ಹೇಗೆ ವಿರೂಪಗೊಳ್ಳುತ್ತಿವೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.  ಅಲ್ಲದೇ ಇದು ಸಮಸ್ಯೆಗಳನ್ನು ಕಂಡುಹಿಡಿಯಲು ಮತ್ತು ಅವುಗಳಿಗೆ ಪರಿಹಾರ ಸೂಚಿಸಲು ಸಹಕಾರಿಯಾಗಿದೆ.

ಚುನಾವಣಾ ಸಂದರ್ಭಗಳಲ್ಲಿ ಚುನಾವಣಾ ಮತಗಟ್ಟೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲಿರಿಸಲು ಜಿಐಎಸ್ ಸಹಾಯ  ಮಾಡುತ್ತದೆ.

ಇಂದಿನ ದಿನಗಳಲ್ಲಿ ಪ್ರತಿಯೊಂದು ರಾಜ್ಯವು ತನ್ನ ವ್ಯವಸ್ತೆಯ ಬಗ್ಗೆ ಕಣ್ಗಾವಲನ್ನು ಇರಿಸಿದೆ. ಇಂತಹ ಸಂದರ್ಭಗಳಲ್ಲಿ ಜಿಐಎಸ್ ಬಹಳ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಕಮೀಷನರ್ ಬಿ.ಕೆ.ಸುರೇಶ್ ಬಾಬು, ಪಂಚರತ್ನ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸೊಸೈಟಿಯ ಕಾರ್ಯದರ್ಶಿ ಪ್ರೊ.ಹೆಚ್. ನಾಗರಾಜು ಮತ್ತು ಭೂಗೋಳಶಾಸ್ತ್ರ ವಿಭಾಗದ ಡಾ. ರಾಮು ಹಾಜರಿದ್ದರು.

ಫೋಟೋ ಶೀರ್ಷಿಕೆ : ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಸಿ.ಬಸವರಾಜು 3 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸುತ್ತಿರುವುದು. ಮಹಾನಗರ ಪಾಲಿಕೆಯ ಉಪ ಕಮೀಷನರ್ ಬಿ.ಕೆ.ಸುರೇಶ್ ಬಾಬು ಮತ್ತಿತರರು ಇದ್ದಾರೆ

Leave a Reply

comments

Tags

Related Articles

error: