ಮೈಸೂರು

ಜ.5 : ಜೈ ಭುವನೇಶ್ವರಿ ಸೇವಾ ಟ್ರಸ್ಟ್ ಸಂಸ್ಥೆ ಉದ್ಘಾಟನೆ ; ಪೌರಕಾರ್ಮಿಕರು ಮತ್ತು ಪೌರಕಾರ್ಮಿಕ ಮುಖಂಡರುಗಳಿಗೆ ಸನ್ಮಾನ

ಮೈಸೂರು,ಜ.3:-  ಜೈ ಭುವನೇಶ್ವರಿ ಸೇವಾ ಟ್ರಸ್ಟ್ (ರಿ) ಸಂಸ್ಥೆಯ ಉದ್ಘಾಟನೆ, 2020ನೇ ಸಾಲಿನ ದಿನದರ್ಶಿಕೆ ಬಿಡುಗಡೆ, ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳ ವಿತರಣೆ, ಪೌರಕಾರ್ಮಿಕರು ಮತ್ತು ಪೌರಕಾರ್ಮಿಕ ಮುಖಂಡರುಗಳಿಗೆ ಸನ್ಮಾನ ಸಮಾರಂಭವನ್ನು ಜ.5ರಂದು ಶಿವಾಜಿ ರಸ್ತೆಯಲ್ಲಿರುವ ರಿಲಯನ್ಸ್ ಕಮ್ಯುನಿಟಿ ಹಾಲ್ ನಲ್ಲಿ  ಹಮ್ಮಿಕೊಳ್ಳಲಾಗಿದೆ.

ಮೈಸುರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ತಿಪ್ಪಯ್ಯ ಮಾತನಾಡಿ  ಜೈ ಭುವನೇಶ್ವರಿ ಸೇವಾ ಟ್ರಸ್ಟ್ (ರಿ), ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉದ್ದೇಶಕ್ಕಾಗಿ ಸ್ಥಾಪಿಸಲ್ಪಟ್ಟಿದ್ದು, ಮೈಸೂರು ನಗರ ಹಾಗೂ ಜಿಲ್ಲಾ ಮಟ್ಟದಲ್ಲಿ ಪೌರಕಾರ್ಮಿಕರು ಮತ್ತು ಅವರ ಅವಲಂಬಿತರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಧ್ಯೇಯೋದ್ದೇಶವನ್ನು ಟ್ರಸ್ಟ್ ಹೊಂದಿದೆ ಜ.5ರಂದು  ಬೆಳಿಗ್ಗೆ 11.30 ಗಂಟೆಗೆ ಸಂಸ್ಥೆಯ ಉದ್ಘಾಟನೆ, 2020ನೇ ಸಾಲಿನ ದಿನದರ್ಶಿ ಬಿಡುಗಡೆ, ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳ ವಿತರಣೆ, ಮತ್ತು ಮೈಸೂರು ನಗರದ ವಿವಿಧ ಕಾಲೋನಿಗಳ ಸುಮಾರು 65 ಪೌರಕಾರ್ಮಿಕರು ಮುಖಂಡರುಗಳು ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ, ವಾಹನ ಚಾಲನ ಪತ್ರ (ಡಿ.ಎಲ್), ಎಲ್.ಎಲ್.ಆರ್‌ಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಸಂಸದ ಪ್ರತಾಪ್ ಸಿಂಹ ನೆರವೇರಿಸಲಿದ್ದು,  ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ  ವಹಿಸಲಿದ್ದು,  ಮುಖ್ಯ ಭಾಷಣಕಾರರಾಗಿ ಪ್ರಗತಿಪರ ಚಿಂತಕ ಪ್ರೊ ಕಬೀರ್ ಮುಸ್ತಫಾ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ   ಇ.ಮಾರುತಿ ಪವಾರ್, ಮಾಜಿ ನಗರ ಪಾಲಿಕೆ ಸದಸ್ಯರಾದ ಟಿ.ರಾಮು, ನಗರ ಪಾಲಿಕೆ ಸದಸ್ಯರುಗಳಾದ ಎಂ.ಸತೀಶ್, ರಮೇಶ್ ರಮಣಿ, ಆರ್.ರಂಗಸ್ವಾಮಿ   ಭಾಗವಹಿಸಲಿದ್ದಾರೆ ಎಂದರು.

ಸುದ್ದಿ ಗೋಷ್ಠಿಯಲ್ಲಿ    ಗೌರವ ಅಧ್ಯಕ್ಷ ಬಾಬಣ್ಣ, ಕಾನೂನು ಸಲಹೆಗಾರ ಹಾಗೂ ವಕೀಲರಾದ ಆರ್.ಲಕ್ಷ್ಮಣ್, ಉಪಾಧ್ಯಕ್ಷರಾದ ಹನುಮಂತ ಆಲಿಯಾಸ್ ಆಜು ಹಾಗೂ ಕಾರ್ಯದರ್ಶಿ ಬಿ.ಶ್ರೀನಿವಾಸ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: