ಸುದ್ದಿ ಸಂಕ್ಷಿಪ್ತ

ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಡ್ಯ (ಜ.3): ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಕೀಳಘಟ್ಟ ಗ್ರಾಮದ ಶ್ರೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಖಾಲಿ ಇರುವ ಅರ್ಚಕರ ಹುದ್ದೆಯನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹಿಂದೂಗಳಾಗಿರಬೇಕು, ಆಗಮ ಪ್ರವರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ 18 ರಿಂದ 40 ವರ್ಷಗಳ ವಯೋಮಿತಿ ಹೊಂದಿರಬೇಕು.

ಅರ್ಜಿಯನ್ನು ಜನವರಿ 10 ರಿಂದ 17ರ ಸಂಜೆ 5:30ರ ಒಳಗಾಗಿ ಕಛೇರಿಯ ಮುಜರಾಯಿ ಶಾಖೆಯಿಂದ ಪಡೆದು, ಜನವರಿ 21ರ ಸಂಜೆ 5:30ರ ಒಳಗಾಗಿ ಮದ್ದೂರು ತಾಲ್ಲೂಕು ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಛೇರಿಯನ್ನು ಸಂಪರ್ಕಿಸಬಹುದು ಎಂದು ಮದ್ದೂರು ತಾಲ್ಲೂಕಿನ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: