ಮೈಸೂರು

ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡಿದೆ : ವಿಜಯ್ ಕುಮಾರ್

132 ನೇ ಕಾಂಗ್ರೆಸ್ ಸಂಸ್ಥಾನದ ದಿನ ಹಾಗೂ ಮಹಿಳಾ ದಿನಾಚರಣೆಯನ್ನು ಬುಧವಾರ ನಗರದ ಪುರಭವನದಲ್ಲಿ ಆಯೋಜಿಸಲಾಗಿತ್ತು.

ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ವಿಜಯ್ ಕುಮಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ‌ ನೀಡಿದರು. ನಂತರ ಮಾತನಾಡಿದ ಅವರು,  ಇಂದು ಐತಿಹಾಸಿಕವಾದ ಬದಕನ್ನು ಹಾಗೂ ಹೋರಾಟವನ್ನು ನೆನಪು ಮಾಡಿಕೊಳ್ಳುವ ದಿನವಾಗಿದೆ. ಕಾಂಗ್ರೆಸ್ ನ ಹುಟ್ಟು ವಿದೇಶಿಯರ ದೊಡ್ಡ ಕನಸು. ರಾಜಕೀಯ ಶಿಕ್ಷಣ, ಸಾಮಾಜಿಕ ಸಬಲೀಕರಣಕ್ಕೋಸ್ಕರ ಪಕ್ಷ ಸ್ಥಾಪಿತವಾಗಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಸಮಾಜದ ಸರ್ವ ಜನಾಂಗದ ಕಲ್ಯಾಣಕ್ಕೆ ಕಾಂಗ್ರೆಸ್ ಸ್ಥಾಪನೆಯಾಗಿದೆ. ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಕೊಟ್ಟ ಸ್ಥಾನವನ್ನು ಮತ್ತಾರು  ಕೊಡಲಾರರು. ಭಾರತದ ಸಂವಿಧಾನ ರಚಿಸುವಾಗಲು ಮೂವರು ಮಹಿಳೆಯರಿದ್ದರು ಎಂದು ಹೇಳಿದರು. ಆದರೆ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತ ಯೋಧರಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ. ಬಿಜೆಪಿ ಕಾರ್ಯಕಾರಣಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಬಳಸಿಕೊಂಡರು. ಬಿಳಿ ಸೀರೆ ಉಡುವ ದೊಡ್ಡ ತ್ಯಾಗ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮುಖ್ಯ ಸಂಘಟಕ ಭೀಮಶಂಕರ್ ಮಾತನಾಡಿ, ವಾರ್ಡ್ ನಲ್ಲಿ 24 ಜನರನ್ನೊಳಗೊಂಡ ಸೇವಾದಳ ಮಾಡಿ, ಮಹಿಳಾ ಸಂಘಟಕರನ್ನು ಮಾಡಬೇಕಾಗಿದೆ. ಕಾರಣ ನಗರ ಭಾಗದಲ್ಲಿ ಸೇವಾದಳ ಕುಂಠತವಾಗುತ್ತಿದ್ದು, ಅದನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿಬೇಕಾಗಿದೆ ಎಂದರು. ಸೇವಾದಳ ಸಮಾಜವನ್ನು ಒಂದೂಗೂಡಿಸಿ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದ್ದೆ. ಬೆಳಗಾಂ ಜಿಲ್ಲೆಯ ಘಟಪ್ರಭದಲ್ಲಿ ಕಚೇರಿ ಸ್ಥಾಪಿಸುತ್ತಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಅಕಾಡೆಮಿ ಮಾಡಿ ಪ್ರತಿಯೊಂದು ಜಿಲ್ಲೆಯಲ್ಲೂ ಅಕಾಡೆಮಿ ಸ್ಥಾಪಿಸುತ್ತೇವೆ. ಕಾಂಗ್ರೆಸ್ ಗೆ ಚಾಲೆಂಜ್ ಮಾಡುವ ಶಕ್ತಿ ಯಾರಿಗೂ ಇಲ್ಲ. ಜಾತಿ ಹೆಸರಿನಲ್ಲಿ ಪಕ್ಷ ಒಡೆಯುವ ಕಾರ್ಯ ನಡೆಸಲು ಬಿಡುವುದಿಲ್ಲ.  ಸೇವಾದಳದ ಮೂಲಕ ಜನರಿಗೆ ಯೋಜನೆ ತಿಳಿಸುವ ಘರ್ ಘರ್ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದೇವೇಳೆ ಮಾಜಿ ಜಿ.ಪಂ ಅಧ್ಯಕ್ಷೆ ಪುಷ್ಪಾ ಅಮರನಾಥ್, ನಂದಿನಿ‌- ಚಂದ್ರಶೇಖರ್ ಮೈಸೂರು ಗ್ರಾಮಾಂತರ ಮಹಿಳಾ ಘಟಕದ ಅಧ್ಯಕ್ಷೆ, ಕಾಂಗ್ರೆಸ್ ಮುಖಂಡ ರವಿಶಂಕರ್, ಓಬಿಸಿ ಅಧ್ಯಕ್ಷ ಶಿವಮೂರ್ತಿ ಸೇರಿದಂತೆ ಇತರೆ‌ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

comments

Related Articles

error: