ಮೈಸೂರು

ಆಗಸ್ಟ್ 27-28: ಚುಂಚನಕಟ್ಟೆ ಜಲಪಾತೋತ್ಸವ

ಮೈಸೂರು: ಕೆ.ಆರ್. ನಗರದ ಚುಂಚನಕಟ್ಟೆ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಆಗಸ್ಟ್ 27-28 ರಂದು ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚುಂಚನಕಟ್ಟೆ ಜಲಪಾತೋತ್ಸವ-2016 ಅನ್ನು ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

27 ರಂದು ಸಂಜೆ 5 ಗಂಟೆಗೆ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ನೆರವೇರಿಸಲಿದ್ದು, ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಉಮಾಶ್ರೀ ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಕಿಂಗ್ ಸ್ಟಾರ್ ಯಶ್ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಗೋವಿಂದರಾಜ್ ಮತ್ತು ತಂಡದಿಂದ ನಾದಸ್ವರ, ಸಂಜೆ 6 ರಿಂದ 6.30ಕ್ಕೆ ಬೆಂಗಳೂರಿನ ಮಾನಸ ಮನೋಜ್ಞ ನೃತ್ಯ ಶಾಲೆಯವರಿಂದ ಭರತನಾಟ್ಯ, 6.30ಕ್ಕೆ ನಿತಿನ್ ರಾಜಾರಾಂ ಶಾಸ್ತ್ರೀ ಮತ್ತು ತಂಡದಿಂದ ಸುಗಮ ಸಂಗೀತ, 7.30ಕ್ಕೆ ನವದೆಹಲಿಯ ಸಲಾಲುದ್ದೀನ್ ಪಾಷಾರಿಂದ ಮ್ಯಾಜಿಕ್ ಆನ್ ವ್ಹೀಲ್ ನಡೆಯಲಿದೆ.

ಆಗಸ್ಟ್ 28 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. 5.30ಕ್ಕೆ ಎಸ್.ಎಸ್. ಮಂಜು ಮತ್ತು ತಂಡದವರಿಂದ ವೀರಭದ್ರನ ಕುಣಿತ, 6ಕ್ಕೆ ಮಿಶ್ರ ನವೀನ್ ಮತ್ತು ತಂಡದಿಂದ ನೃತ್ಯರೂಪಕ, ಖ್ಯಾತಗಾಯಕ ವಿಜಯಪ್ರಕಾಶ್ ಮತ್ತು ತಂಡದಿಂದ ಸುಗಮ ಸಂಗೀತ ನಡೆಯಲಿದೆ.

Leave a Reply

comments

Related Articles

error: