ಮೈಸೂರು

ವಿಶೇಷ ಚೇತನರಿಗೆ ಸಂಬಂಧಿಸಿದ ನೀತಿನಿಯಮ ಜಾರಿ ಸವಲತ್ತು ದೊರಕುವ ನಿಟ್ಟಿನಲ್ಲಿ ಸಹಕರಿಸುವುದು ಎಲ್ಲರ ಜವಾಬ್ದಾರಿ : ಬಿ.ಪಿ. ದೇವಮಾನೆ

ಮೈಸೂರು,ಜ.4:-  ವಿಶೇಷ ಚೇತನರಿಗೆ ಸಂಬಂಧಿಸಿದ ನೀತಿನಿಯಮ ಜಾರಿ , ಸವಲತ್ತು ದೊರಕುವ ನಿಟ್ಟಿನಲ್ಲಿ ಸಹಕರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ.ಪಿ. ದೇವಮಾನೆ ಅಭಿಪ್ರಾಯಪಟ್ಟರು.

ವಿಕಲ ವಿಕಾಸ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಆಯೋಜಿಸಿದ್ದ ಲೂಯಿ ಬ್ರೈಲ್ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೃಷ್ಟಿ ಕರ್ತನ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ. ಆದರೆ ಕೆಲವರು ವಿವಿಧ ಕಾರಣಗಳಿಂದ ವಿಶೇಷ ಚೇತನರಾಗಿರುತ್ತಾರೆ. ಆದರೂ ಅವರು ಇತರೆ ಆರೋಗ್ಯವಂತ ವ್ಯಕ್ತಿಗಳಷ್ಟೇ ಸಮರ್ಥರಾಗಿರುತ್ತಾರೆ. ಇದೇ ವೇಳೆ ರಾಜ್ಯ ಹಾಗೂ ಕೇಂದ್ರ ಸರಕಾರದ ಕಾನೂನುಗಳು ಅವರಿಗೆ ಸಹಕಾರಿಯಾಗಿದ್ದು, ಅವರಿಗಾಗಿಯೇ ವಿಶೇಷ ಕಾನೂನು, ವಿಶೇಷ ನ್ಯಾಯಾಲಯಗಳೂ ಇವೆ. ಅವರಿಗೆ ನೋವಾಗುವ,ಹಿಯ್ಯಾಳಿಸುವ ಸಂದರ್ಭ ಉಂಟು ಮಾಡಿದವರಿಗೆ ಶಿಕ್ಷೆ ವಿಧಿಸಲಾಗಿತ್ತದೆ ಎಂದರು.

ಇದೇ ವೇಳೆ ಸಂಸ್ಥೆ ಮುಖ್ಯಸ್ಥ ಎಸ್.ಎಸ್. ವೈದ್ಯನಾಥ್ ಮಾತನಾಡಿ ಸರ್ಕಾರ ಇಡೀ ಜಗತ್ತಿಗೆ ಬ್ರೈಲ್ ಲಿಪಿ ಕೊಡುಗೆ ನೀಡಿದ ಲೂಯಿಸ್ ಬ್ರೈಲ್ ದಿನವನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಡಾ.ಎನ್. ದಶರಥ್ ಅವರನ್ನು ಸನ್ಮಾನಿಸಲಾಯಿತು. ಆರ್. ಮುನಿರಾಜು,‌ಎಂ.ಎನ್. ರವಿಕುಮಾರ್ ಇತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: