ಕರ್ನಾಟಕ

ಜ.6 ರಿಂದ ಮತದಾರರ ನೋಂದಣಿ ಕಾರ್ಯಕ್ರಮ

ಮಂಡ್ಯ (ಜ.4): ಜಿಲ್ಲೆಯಾದ್ಯಂತ ಎಲ್ಲಾ ಪ್ರೌಢಶಾಲೆ/ ಕಾಲೇಜುಗಳಲ್ಲಿ ಜನವರಿ 6, 7 ಮತ್ತು 8 ರಂದು ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 1ಕ್ಕೆ ಅನ್ವಯವಾಗುವಂತೆ 18 ವರ್ಷ ಪೂರೈಸಿದ ಯುವ ಹಾಗೂ ಭವಿಷ್ಯದ ಮತದಾರರು ನಮೂನೆ-6ರನ್ನು ಅಥವಾ ನೇರವಾಗಿ ಪೂರಕ ದಾಖಲೆಯೊಂದಿಗೆ ಭರ್ತಿಮಾಡಿ ಕಡ್ಡಾಯವಾಗಿ ಹತ್ತಿರದ ಮತಗಟ್ಟೆ ಅಧಿಕಾರಿಗಳ ಮೂಲಕ ಮತದಾರ ನೋಂದಾಣಾಧಿಕಾರಿಗಳಿಗೆ ಅಥವಾ ಸಹಾಯಕ ಮತದಾರ ನೋಂದಾಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: