ಮೈಸೂರು

ವೀರ ಸಾವರ್ಕರ್ ಯುವ ಬಳಗದಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

ಮೈಸೂರು,ಜ.5:- ವೀರ ಸಾವರ್ಕರ್ ಯುವ ಬಳಗದಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಯಿತು.

ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಮತ್ತು ಅವರ ಇಡೀ ಕುಟುಂಬದ ಹೋರಾಟ ಮತ್ತು ತ್ಯಾಗ ಬಹಳ ದೊಡ್ಡದಿದೆ. ಬ್ರಿಟಿಷರ ನಾಡನ್ನೇ ಒಳಹೊಕ್ಕಿ ಸಂಘಟನೆ ಕಟ್ಟಿ ಯುವಕರನ್ನು ಪ್ರೇರೇಪಿಸಿ ಅವರ ವಿರುದ್ಧ ಹೋರಾಟಕ್ಕಿಳಿದರು ಸಾವರ್ಕರ್. ಅವರ ವೀರತ್ವಕ್ಕೆ ಕಾಂಗ್ರೆಸ್ಸಿನ ಸರ್ಟಿಫಿಕೇಟ್ ಬೇಕಿಲ್ಲ. ಬ್ರಿಟಿಷರಿಗೆ ಅವರ ವೀರತ್ವದ ಅರಿವಿದ್ದರಿಂದ ಅವರನ್ನು ತುರ್ಕಿಸ್ತಾನದ ಮರಳುಗಾಡಿನಲ್ಲಿ ಬಂಧಿಸಿಟ್ಟಿದ್ದರು, ನಂತರ ಸಮುದ್ರದಾಚೆಯ ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿಟ್ಟಿದ್ದರು.

ಮಧ್ಯಪ್ರದೇಶದ ಕಾಂಗ್ರೆಸ್ ಸೇವಾದಳ ಪ್ರಕಟಿಸಿರುವ ಸಾವರ್ಕರ್ ವೀರನೇ? ಎಂಬ ಕೈಪಿಡಿಯು ಬಹುಶಃ ಹೊಸವರ್ಷದ ಆಚರಣೆಗಾಗಿ ಬ್ಯಾಂಕಾಕಿನ ಸ್ಟ್ರಿಪ್ ಕ್ಲಬ್, ಗೇ ಕ್ಲಬ್ ಗಳಿಗೆ ಭೇಟಿ ನೀಡುವ ಅಭ್ಯಾಸವಿರುವ ಅವರ ಪಕ್ಷದ ನಾಯಕನ ಸೂಚನೆ ಮೇರೆಗೆ ತಯಾರಿಸಿರುವುದು, ಅಂಥವರಿಂದಲೇ ಇಂಥ ಕೆಳಮಟ್ಟದ ಆಲೋಚನೆಗಳು ಹೊರಬರುವುದು.

ಶಾಂತಿಪ್ರಿಯ ಗಾಂಧಿಯವರ ಹತ್ಯೆಯಾದ ಸಮಯದಲ್ಲಿ ಸಾವರ್ಕರ್ ಅವರ ಮೇಲೆ ಕಲ್ಲುಗಳಿಂದ ದಾಳಿ ಮಾಡಿ ಅವರ ಸಹೋದರ ನಾರಾಯಣ ಸಾವರ್ಕರ್ ನನ್ನು ಕೊಂದ ರಕ್ತಸಿಕ್ತ ಇತಿಹಾಸ ಕಾಂಗ್ರೆಸ್ ಹೊಂದಿದೆ. ದೇಶಕ್ಕೆ ಯಾವುದೇ ಕೊಡುಗೆ ನೀಡಿರದ ನಕಲಿ ಗಾಂಧಿ ರಾಹುಲ್ ಗೆ ಸಾವರ್ಕರ್ ರ ಬಗ್ಗೆ ಮಾತನಾಡುವ ಯಾವುದೇ ಅರ್ಹತೆಯಿಲ್ಲ.

ಕೇಂದ್ರ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ನಡೆಸಿದ ಹೋರಾಟ, ತ್ಯಾಗವನ್ನು, ಸಮಾಜ ಸುಧಾರಣಾ ಕಾರ್ಯವನ್ನು ನೆನೆದು, ಮುಂದಿನ ಪೀಳಿಗೆಗೂ ತಿಳಿಸಲು ಸಾವರ್ಕರ್ ಅವರಿಗೆ “ಭಾರತ ರತ್ನ” ನೀಡಬೇಕು.

ಸಾವರ್ಕರ್ ಬಗೆಗಿನ ಈ ಕೆಟ್ಟ ಪುಸ್ತಕವನ್ನು ನಿಷೇಧಿಸಬೇಕು ಮತ್ತು ಕಾಂಗ್ರೆಸ್ ದೇಶದ ಜನರ ಕ್ಷಮೆಯಾಚಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಕಾಂಗ್ರೆಸ್‌ ಇದೇ ರೀತಿ ಪ್ರವೃತ್ತಿಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನವಾದ ಹೋರಾಟಗಳನ್ನು ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಸಹ ನೀಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ವಿಕ್ರಮ್ ಅಯ್ಯಂಗಾರ್, ಶ್ರೀರಾಮ ಸೇನೆಯ ಸಂಜಯ್, ಮುಖಂಡರಾದ ಸಂದೇಶ್ ಪವಾರ್, ಪ್ರಮೋದ್ ಗೌಡ, ಜೀವನ್, ಟಿ.ಎಸ್.ಅರುಣ್, ಗುರುಮೂರ್ತಿ, ಹರೀಶ್ ಅಂಕಿತ್, ಉಮಾಶಂಕರ್, ಲೀಲಾ ಶೆಣೈ, ಸ್ಮಾರ್ಟ್ ಮಂಜು, ನಿಶಾಂತ್, ಲೋಹಿತ್, ರಂಗನಾಥ್, ಪರಶಿವಮೂರ್ತಿ, ಸುಚೀಂದ್ರ, ಪ್ರಶಾಂತ್ ಸೇರಿದಂತೆ  ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: