ದೇಶಪ್ರಮುಖ ಸುದ್ದಿ

ಹಿಮಪಾತದ ಕಾರಣ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್‌

ಶ್ರೀನಗರ : ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮಳೆ ಮತ್ತು ಹಿಮಪಾತದ ಕಾರಣ ಬುಧವಾರ ಮುಚ್ಚಲಾಗಿದೆ. ಜವಾಹರ್ ಸುರಂಗದಿಂದ ಹೊರಗೆಯೇ ವಾಹನಗಳನ್ನು ತಡೆದು ಸಾಲು ನಿಲ್ಲಿಸಲಾಗಿದೆ. ಮಾತ್ರವಲ್ಲದೆ ಜಮ್ಮು ಅಥವಾ ಶ್ರೀನಗರ ಕಡೆಯಿಂದ ಹೊಸದಾಗಿ ಹೆದ್ದಾರಿ ಪ್ರವೇಶಿಸಲು ವಾಹನಗಳಿಗೆ ಅವಕಾಶ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.

ಮಂಗಳವಾರ ಸಂಜೆಯಿಂದ ಜಮ್ಮು ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಹಿಮ ಸುರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಜಮ್ಮು–ಶ್ರೀನಗರದ ಹೆದ್ದಾರಿಯ ಹಲವೆಡೆ ಮಳೆಯಿಂದ ಭೂ ಕುಸಿತ ಸಂಭವಿಸಿದೆ. ಬನಿಹಾಳ್–ರಾಂಬನ್ ವಲಯದಲ್ಲಿ ಹಿಮಪಾತವಾಗುತ್ತಿದೆ. ಪ್ರವಾಸಿ ಧಾಮ ಸೋನಾಮಾರ್ಗ್’ನಲ್ಲಿ 24 ಗಂಟೆಗಳಲ್ಲಿ ಒಂದು ಅಡಿಗೂ ಹೆಚ್ಚು ಹಿಮ ಬಿದ್ದಿದೆ.

ಗಗನ್‌ಗೀರ್, ಕುಲ್ಲಾನ್ ಹಾಗೂ ಗುಂಡ್‌ ಪ್ರದೇಶಗಳಲ್ಲಿ ಮೂರರಿಂದ ಐದು ಅಡಿಗಳಷ್ಟು ಹಿಮ ಬಿದ್ದಿದೆ. ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಮಂಗಳವಾರ ಸಂಜೆಯಿಂದ ದಟ್ಟ ಮೋಡ ಕವಿದಿದ್ದು ಆಗಾಗ ಮಳೆ ಸುರಿಯುತ್ತಿದೆ.

Leave a Reply

comments

Related Articles

error: