ಕರ್ನಾಟಕ

ಬೈಕ್-ಕಾರು ನಡುವೆ ಅಪಘಾತ: ದಂಪತಿ ಸಾವು

ಕಾಸರಗೋಡು,ಜ.6-ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಮೃತಪಟ್ಟಿರುವ ಘಟನೆ ಮುಳ್ಳೇರಿಯಾ ಸಮೀಪದ ಕಾರಡ್ಕದಲ್ಲಿ ನಡೆದಿದೆ.

ಗೋವಿಂದ ರಾಜ್ (53) ಮತ್ತು ಪತ್ನಿ ಉಮಾವತಿ (42) ಮೃತಪಟ್ಟವರು. ಇವರು ಮೂಲತಃ ತಮಿಳುನಾಡು ನಿವಾಸಿಗಳಾಗಿದ್ದು, ಕಾರಡ್ಕದಲ್ಲಿ ವಾಸವಾಗಿದ್ದರು. ಗೋವಿಂದರಾಜ್ ಮುಳ್ಳೇರಿಯದಲ್ಲಿ ಸೆಲೂನ್ ಅಂಗಡಿ ನಡೆಸುತ್ತಿದ್ದರು.

ಗೋವಿಂದರಾಜ್ ಮತ್ತು ಉಮಾವತಿ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಅತೀ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಅನ್ನು ಮೀಟರ್ ಗಳಷ್ಟು ದೂರ ಕಾರು ಎಳೆದೊಯ್ದಿದೆ. ಇದರಿಂದ ಗಂಭೀರ ಗಾಯಗೊಂಡ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ತೆಗೆದುಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. (ಎಂ.ಎನ್)

Leave a Reply

comments

Related Articles

error: