ಪ್ರಮುಖ ಸುದ್ದಿ

ಘನ ತ್ಯಾಜ್ಯ ನಿರ್ವಹಣೆ ತರಬೇತಿ ಕಾರ್ಯಾಗಾರಕ್ಕೆ ನಾಳೆ ಚಾಲನೆ

ರಾಜ್ಯ( ಮಡಿಕೇರಿ) ಜ.7 :- ಘನ ತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವು ಜ.7 ಮತ್ತು 8 ರಂದು ಜಿ.ಪಂ.ನೂತನ ಸಭಾಂಗಣದಲ್ಲಿ ನಡೆಯಲಿದೆ.
ಜ.7 ರಂದು ಬೆಳಗ್ಗೆ 10.15 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ಕಾರ್ಯದರ್ಶಿ ಗುಡೂರು ಭೀಮ ಸೇನ, ಹಸಿರು ದಳದ ನಳಿನಿ ಶೇಖರ್ ಇತರರು ಪಾಲ್ಗೊಳ್ಳಲಿದ್ದಾರೆ.
ನಳಿನ್ ಕುಮಾರ್ ಅವರು ಘನ ತ್ಯಾಜ್ಯ ನಿರ್ವಹಣೆ ಕಾಯ್ದೆ-ಉಪವಿಧಿಗಳು ಮತ್ತು ನಿಯಮಗಳ ಬಗ್ಗೆ ವಿಶ್ಲೇಷಣೆ ಹಾಗೂ ಮನವರಿಕೆ, ಗ್ರಾಮ ಪಂಚಾಯಿತಿಗಳ ಯಶೋಗಾಥೆ ಬಗ್ಗೆ ಮಾತನಾಡಲಿದ್ದಾರೆ.
ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ರೌಂಡ್ ಟೇಬಲ್ ಡಾ.ಶಾಂತಿ ತುಮ್ಮಾಲ ಅವರು ಪ್ಲಾಸ್ಟಿಕ್ ನಿಷೇಧ ಮತ್ತು ಶೂನ್ಯ ತ್ಯಾಜ್ಯ ಸಾಧನೆ-ಎಚ್.ಎಸ್.ಆರ್ ಯಶೋಗಾಥೆ ಮತ್ತು ಗ್ರೀನ್ ದಿ ರೆಡ್ ಕ್ಯಾಂಪೇನ್ (ಪರ್ಯಾಯ ಮಹಿಳೆಯರ ವೈಯಕ್ತಿಕ ಶುಚಿತ್ವ) ಬಗ್ಗೆ ಮಾತನಾಡಲಿದ್ದಾರೆ.
ವಾಸುಕಿ ಐಯ್ಯಂಗಾರ್ ಅವರು ಸರಳ ವಿಧಾನದಲ್ಲಿ ಹಸಿಕಸದಿಂದ ಗೊಬ್ಬರ ತಯಾರಿಕೆ ಮತ್ತು ಮಣ್ಣಿನ ಆರೋಗ್ಯ ಪ್ರಾತ್ಯಕ್ಷಿಕೆ ನಡೆಯಲಿದೆ. ನಂತರ ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: