ಕ್ರೀಡೆ

ಭಾರತ ಮತ್ತು ಶ್ರೀಲಂಕಾ ನಡುವಿನ ಟಿ 20 ಸರಣಿ : ದಿಗ್ಗಜರ ವಾಪಸಾತಿ

ದೇಶ(ನವದೆಹಲಿ)ಜ.7:-   ಭಾರತ ಮತ್ತು ಶ್ರೀಲಂಕಾ ನಡುವಿನ ಟಿ 20 ಸರಣಿ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಮೊದಲ ಪಂದ್ಯವನ್ನು ಗುವಾಹಟಿಯಲ್ಲಿ ಆಡಬೇಕಿತ್ತು ಆದರೆ ಮಳೆಯಿಂದಾಗಿ ಅದನ್ನು ರದ್ದುಗೊಳಿಸಬೇಕಾಯಿತು. ಈಗ ಎರಡೂ ತಂಡಗಳು ಇಂದು ಸಂಜೆ ಸರಣಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.

ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಭಾರತದ ಪ್ಲೇಯಿಂಗ್ ಇಲೆವೆನ್ ಗೆ ಮರಳಲಿದ್ದಾರೆ. ಗಾಯದ ನಂತರ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧ ಇಂದೋರ್ ಟಿ 20 ಯಲ್ಲಿ ಭಾರತ ತಂಡದಲ್ಲಿ  ಕೆಲವು ಸಣ್ಣ ಬದಲಾವಣೆಗಳಾಗಲಿವೆ. ಕೆಲವು ಆಟಗಾರರು ಗಾಯದಿಂದ ಚೇತರಿಸಿಕೊಂಡು ಮರಳಿದ ಕಾರಣ  ಉಳಿದ ಪ್ರಮುಖ ಆಟಗಾರರು ವಿಶ್ರಾಂತಿಗೆ ತೆರಳಿದ ಕಾರಣ  ಹಲವು  ಬದಲಾವಣೆಯನ್ನು ಕಾಣಬಹುದಾಗಿದೆ.

ಈ ಸರಣಿಯಲ್ಲಿ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್ ಧವನ್ ಗಾಯದ ನಂತರ ಮರಳುತ್ತಿದ್ದಾರೆ. ಕೆಎಲ್ ರಾಹುಲ್ ಧವನ್ ಜೊತೆ  ಭಾರತೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಟೀಮ್ ಇಂಡಿಯಾದ ಮಧ್ಯಮ ಕ್ರಮದಲ್ಲಿ  ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಶ್ರೇಯಸ್ ಅಯ್ಯರ್ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಕೆಲವು ಉತ್ತಮ ಇನ್ನಿಂಗ್ಸ್ ಆಡಿದ ರಿಷಭ್ ಪಂತ್ ಮತ್ತೊಮ್ಮೆ ವಿಕೆಟ್ ಕೀಪಿಂಗ್ ಅನ್ನು ನಿರ್ವಹಿಸುತ್ತಿದ್ದಾರೆ.

ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಶ್ರೀಲಂಕಾ ವಿರುದ್ಧ ಆಡಲಿದ್ದಾರೆ. ಇಬ್ಬರೂ ಬ್ಯಾಟಿಂಗ್ ಮತ್ತು  ಮತ್ತು ಬೌಲಿಂಗ್ ನಲ್ಲಿ  ತಂಡಕ್ಕೆ ಗಮನಾರ್ಹ ಕೊಡುಗೆ ನೀಡಲು ಸಮರ್ಥರಾಗಿದ್ದಾರೆ.

ತಂಡದಲ್ಲಿ ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್ / ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್ / ನವದೀಪ್ ಸೈನಿ , ವಾಷಿಂಗ್ಟನ್ ಸುಂದರ ಇದ್ದಾರೆ. (ಎಸ್.ಎಚ್)

Leave a Reply

comments

Related Articles

error: