ಮೈಸೂರು

ಗೀತಾರ್ಣವ ಕಾರ್ಯಕ್ರಮ: ಮಾ.11 ಮತ್ತು 12 ರಂದು

ಸ್ವರಾಶ್ರಮ ಗಾನ ಸಭಾ, ಕಲಾಸಂದೇಶ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಗೀತಾರ್ಣವ – 2017 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವ್ಯವಸ್ಥಾಪಕ ಧರ್ಮದರ್ಶಿ ಹರ್ಷಿಣಿ ತಿಳಿಸಿದರು.
ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾ.11 ಹಾಗೂ 12 ರಂದು ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಖ್ಯಾತ ಉದ್ಯಮಿ ಹಾಗೂ ಕಲಾ ಪೋಷಕರಾದ ಕಲಾಸೇವಾ ರತ್ನ ಶ್ರೀ ಕೆ.ವಿ.ಮೂರ್ತಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಈ ಗೀತಾರ್ಣವ ಕಾರ್ಯಕ್ರಮ ಎರಡು ದಿನಗಳು ನಡೆಯಲಿದ್ದು, ಸಂಗೀತ ಕಲೋತ್ತುಂಗ ಡಾ.ರಾ.ಸ. ನಂದಕುಮಾರ್ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಪಂಡಿತ್ ಶ್ರೀ ವೆಂಕಟೇಶ್ ಕುಲಕರ್ಣಿ ರವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ , ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸಂದೇಶ್ ಭಾರ್ಗವ್, ಮನು, ಚಂದ್ರಕಲಾ, ಮಮತಾ, ಕಲಾವತಿ ಹಾಜರಿದ್ದರು.

Leave a Reply

comments

Related Articles

error: