
ಪ್ರಮುಖ ಸುದ್ದಿ
‘ಅಮೆರಿಕವು ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ : ನಾನು ನಾಳೆ ಹೇಳಿಕೆ ನೀಡುತ್ತೇನೆ : ಡೊನಾಲ್ಡ್ ಟ್ರಂಪ್
ದೇಶ(ನವದೆಹಲಿ)ಜ.8: ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಯುಎಸ್ ಮಿಲಿಟರಿ ಪಡೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ಈ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ಅದರಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ. ಇರಾಕ್ನಲ್ಲಿ ಅಮೆರಿಕದ ಎರಡು ವಾಯುನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ನಾವು ನಷ್ಟವನ್ನು ನಿರ್ಣಯಿಸುತ್ತಿದ್ದೇವೆ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇದೆ. ನಾವು ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಆಧುನಿಕ ಸಶಸ್ತ್ರ ಪಡೆಗಳನ್ನು ಹೊಂದಿದ್ದೇವೆ. ನಾಳೆ ಬೆಳಿಗ್ಗೆ ಈ ವಿಷಯದ ಬಗ್ಗೆ ನಮ್ಮ ಹೇಳಿಕೆಯನ್ನು ನೀಡುತ್ತೇವೆ ಎಂದಿದ್ದಾರೆ. (ಎಸ್.ಎಚ್)