ಮೈಸೂರು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನನ್ನು ಭೇಟಿ ಮಾಡಿದ ಜಯಕುಮಾರ್

ಎರಡೂ ಕಿಡ್ನಿಯ ವೈಫಲ್ಯದಿಂದ ಬಳಲುತ್ತಿದ್ದ ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಜಯಕುಮಾರ್ ತನ್ನ ಕೊನೆಯ ಆಸೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಸಂಸದ ಧ್ರುವ ನಾರಾಯಣ ಅವರನ್ನು ಭೇಟಿಯಾಗುವುದು ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದ. ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಯುವಕನ ಯೋಗ ಕ್ಷೇಮ ವಿಚಾರಿಸಲು ಪಾಲಿಕೆಯ ಸದಸ್ಯ ಸ್ನೇಕ್ ಶ್ಯಾಂ ತೆರಳಿದಾಗ ಅವರ ಬಳಿ ತನ್ನ ಮನದಿಂಗಿತ ವ್ಯಕ್ತಪಡಿಸಿದ್ದ. ಅದರಂತೆ ಸ್ನೇಕ್ ಶ್ಯಾಂ ಯುವಕನನ್ನು ಬೆಂಗಳೂರಿಗೆ ಕರೆದೊಯ್ದು ಶಿವರಾಜ್ ಕುಮಾರ್ ನನ್ನು ಭೇಟಿ ಮಾಡಿಸಿದ್ದಾರೆ.

ಸಿಟಿಟುಡೆ ಈ ಕುರಿತು ಮಾರ್ಚ್ 5ರಂದು ವರದಿ ಮಾಡಿತ್ತು. ಸಿಟಿಟುಡೆ ಫಲಶ್ರುತಿಯಾಗಿ ಶಿವರಾಜ್ ಕುಮಾರ್ ಯುವಕನ ಭೇಟಿಗೆ ಬೆಂಗಳೂರಿನಲ್ಲಿ ಅವಕಾಶ ಮಾಡಿಕೊಟ್ಟಿದ್ದು, ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಯುವಕನನ್ನು ಬೆಂಗಳೂರಿಗೆ ವಿಶೇಷ ಆ್ಯಂಬುಲೆನ್ಸ್ ಮೂಲಕ ಕರೆದೊಯ್ದು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಶಿವರಾಜ್ ಕುಮಾರ್ ನಾನು ವೆಬ್ ಸೈಟ್ ನಲ್ಲಿ ಸುದ್ದಿ ಓದಿದ್ದೆ. ಆದರೆ ಚಿತ್ರೀಕರಣವಿದ್ದರಿಂದ ಆಸ್ಪತ್ರೆಗೆ ಬರಲು ಸಾಧ್ಯವಾಗಿರಲಿಲ್ಲ. ಚಿಕಿತ್ಸೆಗೆ ಅಗತ್ಯವಾದ ನೆರವನ್ನು ನೀಡುತ್ತೇನೆ ಎಂದಿದ್ದಾರೆ. ಜಯಕುಮಾರ್ ಗೂ ಸಹ ತನ್ನ ನೆಚ್ಚಿನ ನಟನ ಭೇಟಿಯಿಂದ ತುಂಬಾ ಸಂತೋಷವಾಗಿದೆಯಂತೆ. (ಕೆ.ಎಸ್.,ಎಸ್.ಎಚ್)

Leave a Reply

comments

Related Articles

error: