ಮೈಸೂರು

ಪುರಾತನ ತಾಳೆಗರಿ ಗ್ರಂಥಗಳ ರಕ್ಷಣೆಯನ್ನು ಸೆಮಿಕಂಡಕ್ಟರ್ ವೇಫರ್ ಫಿಶ್ ಡಿಸ್ಕ್‌ ಮೂಲಕ ಮಾಡಬಹುದು : ಪ್ರೊ. ಪಿ.ಆರ್. ಮುಕುಂದ್

ಮೈಸೂರು,ಜ.8:- ಪುರಾತನ ತಾಳೆಗರಿ ಗ್ರಂಥಗಳ ರಕ್ಷಣೆಯನ್ನು ಸೆಮಿಕಂಡಕ್ಟರ್ ವೇಫರ್ ಫಿಶ್ ಡಿಸ್ಕ್‌ ಮೂಲಕ ಮಾಡಬಹುದು ಎಂದು ಪ್ರೊ. ಪಿ.ಆರ್. ಮುಕುಂದ್ ಹೇಳಿದ್ದಾರೆ.

ಸುಮಾರು 70 ಸಾವಿರ ತಾಳೆಗರಿಗಳನ್ನು ಹೊಂದಿರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯಕ್ಕೆ ಇಂದು ಅವರು ಆಗಮಿಸಿ, ತಾಳೆಗರಿಗಳನ್ನು ವೀಕ್ಷಿಸಿದರು. ಭಾರತೀಯ ಮೂಲದ ಇವರು ಸದ್ಯ ಅಮೆರಿಕಾದ ನ್ಯೂ ಯಾರ್ಕ್​ನ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕಾದ ವಿಜ್ಞಾನಿಗಳು ಸಂಶೋಧನೆ ಮಾಡಿದ ಕಂಪ್ಯೂಟರ್ ಚಿಪ್ ಮಾದರಿಯ ಸೆಮಿಕಂಡಕ್ಟರ್ ವೇಪರ್ ಫಿಶ್ ಡಿಸ್ಕ್​​ನನ್ನು ಬಳಸಿ ಈ ತಾಳೆಗರಿಗಳನ್ನು ಸಂರಕ್ಷಣೆ ಮಾಡಬಹುದು ಎಂದರು. ಪ್ರೊ. ಪಿ.ಆರ್. ಮುಕುಂದ್​​ರಿಂದ ತಾಳೆಗರಿಗಳ ವೀಕ್ಷಣೆ ಈ ಡಿಸ್ಕ್ ಚಿನ್ನ, ಅಲ್ಯೂಮಿನಿಯಂನಿಂದ ತಯಾರಿಸಲ್ಪಟ್ಟಿದ್ದು, ತಾಳೆಗರಿಯ ಮೇಲಿನ ಅಕ್ಷರಗಳು ಹಾಗೂ ಲಿಪಿಗಳನ್ನು ಸಂಗ್ರಹಿಸಿ ವೇಫರ್ ಫಿಶ್ ಡಿಸ್ಕ್​ನಲ್ಲಿ ಹಾಕಲಾಗುತ್ತದೆ. ಇದು ಮಳೆ, ಗಾಳಿ ಹಾಗೂ ಬೆಂಕಿಯಿಂದಲೂ ನಾಶವಾಗದಂತಹ ಡಿಸ್ಕ್ ಆಗಿದ್ದು, ಸಾವಿರಾರು ವರ್ಷ ಹಾಳಾಗದಂತೆ ನಿರ್ವಹಣೆ ಮಾಡಬಹುದಾಗಿದೆ. ಈ ಡಿಸ್ಕ್​​ನಲ್ಲಿರುವ ಅಕ್ಷರಗಳನ್ನು ಓದಲು ಯಾವುದೇ ಕಂಪ್ಯೂಟರ್ ಅವಶ್ಯಕತೆ ಇರುವುದಿಲ್ಲ, ಲೈಟ್, ಲೆನ್ಸ್ ಹಾಗೂ ಮೈಕ್ರೋಸ್ಕೋಪ್ ಇದ್ದರೆ ಸಾಕು ಎನ್ನುತ್ತಾರೆ ಪ್ರೊ. ಪಿ.ಆರ್.ಮುಕುಂದ್ . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: