ಮೈಸೂರು

ಸೂಕ್ತ ಭದ್ರತೆಯಲ್ಲಿ ಕೊಠಡಿಗೆ ಬಂದ ಪ್ರಶ್ನೆ ಪತ್ರಿಕೆ : ನಿರಾತಂಕವಾಗಿ ಪರೀಕ್ಷೆ ಬರೆಯಲು ಸಿದ್ಧರಾದ ವಿದ್ಯಾರ್ಥಿಗಳು

  ಎಲ್ಲರ ಮುಖದಲ್ಲೂ ಏನೋ ಕಳವಳ. ಆದರೂ ಕೊನೆಗೊಮ್ಮೆ ನೋಡಿಕೊಂಡು ಬಿಡೋಣ ಎಂದು ಎಲ್ಲರೂ ತಮ್ಮ ಪುಸ್ತಕಗಳನ್ನು ತೆರೆದಿಟ್ಟುಕೊಂಡಿದ್ದರು. ಸ್ನೇಹಿತರ ಜೊತೆ ಅಲ್ಲಿಯೇ  ಈ ಪ್ರಶ್ನೆ ಬೀಳಬಹುದಾ? ಇದರ ಉತ್ತರವನ್ನೇನು  ಎಂಬಿತ್ಯಾದಿ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು. ಇನ್ಕೆಲವರು ಕಣ್ಮುಚ್ಚಿ ಅಲ್ಲೇ ಮನನ ಮಾಡುತ್ತಿದ್ದರು. ಇಂಥಹ ದೃಶ್ಯಗಳು ಕಂಡು ಬಂದಿದ್ದು ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ.

ಬೆಳಿಗ್ಗೆ 10.15ರಿಂದ ಆರಂಭವಾಗುವ ಪರೀಕ್ಷೆಗೆ ಮೊದಲ ದಿನವಾದ್ದರಿಂದ ಎಲ್ಲ ಪರೀಕ್ಷಾರ್ಥಿಗಳು ಒಂದು ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು.  ಕೆಲವರು ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದನ್ನು ಪರಿಶೀಲಿಸಿದರು. ಗುರುವಾರ  ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬೆಳಿಗ್ಗೆ 10:15 ರಿಂದ ಆರಂಭಗೊಂಡು ಮಧ್ಯಾಹ್ನ 1:30 ರವರೆಗೆ ನಡೆಯಲಿದೆ.

36,891 ವಿದ್ಯಾರ್ಥಿಗಳ ಪೈಕಿ, 30,115 ಹೊಸಬರು, 5216 ರಿಪೀಟರ್ ಗಳು, 1560 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿಜ್ಞಾನ ವಿಭಾಗದಲ್ಲಿ 11,905 ವಿದ್ಯಾರ್ಥಿಗಳು. ಕಲಾ ವಿಭಾಗದಲ್ಲಿ 12,833 ವಿದ್ಯಾರ್ಥಿಗಳು. ವಾಣಿಜ್ಯ ವಿಭಾಗದಲ್ಲಿ 12,153 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸೂಕ್ತ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೊಠಡಿಗೆ ತರಲಾಯಿತು.  ಏತನ್ಮಧ್ಯೆ ಸದ್ವಿದ್ಯಾ ಶಾಲೆಯ ಬಳಿ  ಪಾಲಿಕೆಯ ಸದಸ್ಯ ಪ್ರಶಾಂತ ಗೌಡ ಸೇರಿದಂತೆ ಪ್ರಜ್ಞಾವಂತ ನಾಗರಿಕ ವೇದಿಕೆಯ ಜೋಗಿ ಮಂಜು, ವಿಕ್ರಂ, ವಿವೇಕ್, ಜಗದೀಶ್ ಮತ್ತಿತರರು ವಿದ್ಯಾರ್ಥಿಗಳಿಗೆ ಲೇಖನಿ ಹಾಗೂ ಹೂ ನೀಡಿ  ಪರೀಕ್ಷೆಯನ್ನು ಯಾವುದೇ ಗೊಂದಲಗಳಿಲ್ಲದೇ ನಿರಾತಂಕವಾಗಿ ಎದುರಿಸಲು ತಿಳಿಸಿದರು.

ಅನಾರೋಗ್ಯ ಹಾಗೂ ಇನ್ನಿತರೇ ಕಾರಣಗಳಿಂದ ಪರೀಕ್ಷೆಗೆ ಹಾಜರಾಗದವರ ಕುರಿತ ವಿವರ ಮಧ್ಯಾಹ್ನದ ಬಳಿಕ ತಿಳಿದುಬರಲಿದೆ. (ಕೆ.ಎಸ್.ಎಸ್.ಎಚ್).

Leave a Reply

comments

Related Articles

error: