ಮೈಸೂರು

ಹುಣಸೂರು ತಾಲೂಕಿನ 41 ಗ್ರಾಪಂ ಕೇಂದ್ರಗಳಲ್ಲೂ ಆರೋಗ್ಯ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗಿದೆ : ಶಾಸಕ ಎಚ್.ಪಿ.ಮಂಜುನಾಥ್

ಹುಣಸೂರು,ಜ.9:- ಆರೋಗ್ಯ ಕಾರ್ಡ್‌ಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಹುಣಸೂರು ತಾಲೂಕಿನ 41 ಗ್ರಾಪಂ ಕೇಂದ್ರಗಳಲ್ಲೂ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

ಹನಗೋಡಿನ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ನಿನ್ನೆ  ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಕಾರ್ಡ್ ವಿತರಣೆ ಮಾಡಿ ಬಳಿಕ ಮಾತನಾಡಿದರು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬಕ್ಕೆ 1.50 ಲಕ್ಷ ರೂ.ವರೆಗೂ ಆರೋಗ್ಯ ಶುಲ್ಕ ವಿನಾಯಿತಿ ಪಡೆಯಬಹುದಾಗಿದೆ. ಈ ಆರೋಗ್ಯ ಕಾರ್ಡ್ ಬಡ ಕುಟುಂಬಗಳಿಗೆ ಆಧಾರವಾಗಿದ್ದು, ಮಾಹಿತಿ ಪಡೆದುಕೊಂಡವರು ಎಲ್ಲರಿಗೂ ತಿಳಿಸಿ, ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ತಾಲೂಕಿನ ಎಲ್ಲ ಗ್ರಾಪಂ ಕೇಂದ್ರ ಹಾಗೂ 21 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆರೋಗ್ಯ ಕಾರ್ಡ್ ಸೇರಿದಂತೆ ಬಾಪೂಜಿ ಕೇಂದ್ರದಲ್ಲಿ ಸಿಗುವ ಸೇವೆಗಳು, ನಿಗದಿತ ಶುಲ್ಕ ಹಾಗೂ ನೋಂದಾಯಿತ ಆಸ್ಪತ್ರೆಗಳ ಬಗ್ಗೆ ವಿವರವಾದ ಮಾಹಿತಿಯುಳ್ಳ ಫಲಕ ಅಳವಡಿಸಬೇಕೆಂದು ತಾಪಂ ಇಒ ಗಿರೀಶ್, ಟಿಎಚ್‌ಒ ಡಾ.ಕೀರ್ತಿಕುಮಾರಿಗೆ ಸೂಚಿಸಿದರು.

ಈ ಸಂದರ್ಭ ಡಾ.ಜೋಗೇಂದ್ರನಾಥ್, ಪಿಡಿಒ ನಾಗೇಂದ್ರಕುಮಾರ್, ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ, ಸದಸ್ಯ ಇಮ್ತಿಯಾಜ್ ಪಾಷಾ, ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಸದಸ್ಯರಾದ ರೂಪಾ ನಂದೀಶ್, ರಾಜೇಂದ್ರಬಾಯಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: