ಮೈಸೂರು

ರಂಗರಾವ್ ಸ್ಮಾರಕ ಅಂಗವಿಕಲರ ಶಾಲೆಯ 32ನೇ ವಾರ್ಷಿಕೋತ್ಸವ : ಹಾಡಿ ಕುಣಿದ ಮಕ್ಕಳು

ಮೈಸೂರು, ಜ.9:- ಎನ್‍ಆರ್ ಸಮೂಹದ ಪರೋಪಕಾರಿ ಅಂಗವಾದ ಎನ್‍ಆರ್ ಫೌಂಡೇಶನ್‍ನಿಂದ ನಡೆಸಲಾಗುವ ರಂಗರಾವ್ ಸ್ಮಾರಕ ಅಂಗವಿಕಲರ ಶಾಲೆಯ 32ನೇ ವಾರ್ಷಿಕೋತ್ಸವವನ್ನು ಶಾಲಾ ಆವರಣದಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು.

ವಿಕಲಚೇತರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕಿ ಕೆ.ಲೀಲಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು    ನಾವು ನಮ್ಮ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸಿದರೆ ಮಾತ್ರ ಉತ್ತಮ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯ. ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಕೌಶಲ್ಯಗಳನ್ನೂ ಒದಗಿಸುವ ಮೂಲಕ ನಾವು ಉತ್ತಮ ಸಮಾಜವನ್ನು ನಿರ್ಮಿಸಬಹುದು  ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್.ಆರ್. ಸಮೂಹದ ಚೇರ್ಮನ್   ಆರ್. ಗುರು  ಮಾತನಾಡಿ ಇದು ನಮಗೆ ಹೆಮ್ಮೆಯ ದಿನ. ಆರ್‍ಎಂಎಸ್‍ಡಿ ಶಾಲೆಯು ಈವರೆಗೆ ಅನೇಕರ ಬಾಳಿನಲ್ಲಿ ಬದಲಾವಣೆಗಳನ್ನು ತಂದಿದೆ. ಸಾವಿರಾರು ಮಕ್ಕಳ ಜೀವನಕ್ಕೆ ಹೊಸ ದಿಶೆ ತೋರಿಸಿದೆ. ವಿದ್ಯಾರ್ಥಿಗಳ ಪ್ರದರ್ಶನಗಳು ಆಕರ್ಷಕವೂ ಮತ್ತು ಸ್ಪೂರ್ತಿದಾಯಕವೂ ಆಗಿದ್ದವು. ನಮ್ಮ ಕೆಲಸವನ್ನು ನಾವು ಹೆಚ್ಚು ಉತ್ಸಾಹದಿಂದ ಮುಂದುವರೆಸುವಂತೆ ಈ ಕಾರ್ಯಕ್ರಮ ಸ್ಪೂರ್ತಿ ನೀಡುತ್ತದೆ” ಎಂದರು.

ರಂಗರಾವ್ ಸ್ಮಾರಕಅಂಗವಿಕಲರ ಶಾಲೆಯಅತಿದೊಡ್ಡ ಕಾರ್ಯಕ್ರಮಗಳಲ್ಲಿ ವಾರ್ಷಿಕೋತ್ಸವವೂಒಂದು. ಇದನ್ನುಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಮಕ್ಕಳು ಶಾಸ್ತ್ರೀಯ ನೃತ್ಯ, ಕೋಲಾಟ, ನೃತ್ಯರೂಪಕ, ಸಮೂಹ ಗಾಯನ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಜೆ.ಮಮತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ಪದ್ಮಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿದ್ಯಾರ್ಥಿಗಳ ಅದ್ಭುತ ಪ್ರದರ್ಶನದ ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: