
ಪ್ರಮುಖ ಸುದ್ದಿ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಆಪ್ತ ಸಹಾಯಕನ ಬಂಧನ
ದೇಶ(ರಾಯ್ಪುರ)ಜ.9:- ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಅವರ ಪಿಎ ಒ.ಪಿ.ಗುಪ್ತಾ ನನ್ನು ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ರಾಯಪುರ ಪೊಲೀಸರು ಅಪ್ರಾಪ್ತ ಬಾಕಿಯ ಮೇಲೆ ಅತ್ಯಾಚಾರ ಆರೋಪದ ಮೇಲೆ ಬಂಧಿಸಿದ್ದಾರೆ.
ಒಪಿ ಗುಪ್ತಾ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬಾಲಕಿ 13 ನೇ ವರ್ಷದವಳಿದ್ದಾಗಿನಿಂದಲೇ ಒಪೊ ಗುಪ್ತಾ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು, ಬಾಲಕಿ ಎರಡು ಬಾರಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಗರ್ಭಪಾತ ಮಾಡಿಸಲಾದೆಯಂತೆ. ಸಿವಿಲ್ ಲೈನ್ ಪೊಲೀಸರು ಇಂದು 2 ಗಂಟೆ ಸುಮಾರಿಗೆ ಒಪಿ ಗುಪ್ತಾ ಮನೆಗೆ ತಲುಪಿದ್ದು, ಅಲ್ಲಿಂದ ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ರಾಯ್ಪುರ ಪೊಲೀಸರ ಪ್ರಕಾರ, ಒಪಿ ಗುಪ್ತಾ ಬಾಲಕಿಯ ಅಸಹಾಯಕತೆಯ ಲಾಭವನ್ನು ಪಡೆದುಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಒಪಿ ಗುಪ್ತಾ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ಇನ್ನೂ ಹಲವು ವಿಚಾರಗಳು ಬಹಿರಂಗಗೊಳ್ಳಬಹುದೆಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸಿಸ್, ಎಸ್.ಎಚ್)