
ಮೈಸೂರು
ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶನ ಪ್ರಕರಣ : ದೇಶ ವಿರೋಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ; ಗೋ ಮಧುಸೂದನ್
ಮೈಸೂರು,ಜ.9:- ಮೈಸೂರು ವಿವಿ ಕ್ಯಾಂಪಸ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಪ್ರತಿಕ್ರಿಯೆ ನೀಡಿದ್ದು, ಅಮಾಯಕರಂತೆ ಪೋಸ್ಟರ್ ಪ್ರದರ್ಶಿದ ಪ್ರಕರಣವನ್ನು ಲಘುವಾಗಿ ಪರಿಗಣಿಸಬಾರದು ಎಂದಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಅವರು ಜಿಹಾದಿ,ನಕ್ಸಲ್,ಕಮ್ಯೂನಿಸ್ಟ್ ಶಕ್ತಿಗಳು ಇದರ ಹಿಂದೆ ಇದೆ. ರಾಜ್ಯ ಸರ್ಕಾರವು ದೇಶ ವಿರೋಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದರು.
ಮೈಸೂರು ವಿವಿ ಕುಲಪತಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ಹಿಂದೆ ಯಾವ ಪ್ರಾಧ್ಯಾಪಕರಿದ್ದಾರೆ ಎಂದು ತಿಳಿದು ಕ್ರಮ ಕೈಗೊಳ್ಳಬೇಕು . ಭಾರತವನ್ನು ದುರ್ಬಲಗೊಳಿಸಲು ಷಡ್ಯಂತ್ರ ಮೂಲಭೂತ ಸಂಘಟನೆಗಳು ನಡೆಸುತ್ತಿದೆ. ಮೋದಿ ಸರ್ಕಾರದ ವಿರುದ್ಧ ಪಿತೂರಿ ನಡೆಯುತ್ತಿದೆ. ಮೋದಿ ಬೆಳವಣಿಗೆ ಇವರಿಗೆ ನುಂಗಲಾರದ ತುತ್ತಾಗಿದೆ ಎಂದು ಕಿಡಿ ಕಾರಿದರು. (ಕೆ.ಎಸ್,ಎಸ್.ಎಚ್)