ಮೈಸೂರು

ದೂರು ನೀಡಿದ್ದಕ್ಕೆ ಪೋಷಕರಿಗೆ ಕಿರುಕುಳ

ಅಪಘಾತ ಮಾಡಿದ ಕಾರುಮಾಲಿಕನ ವಿರುದ್ದ ಕೇಸ್ ದಾಖಲಿಸಿದಕ್ಕೆ ಕೇಸ್ ಹಿಂಪಡೆಯುವಂತೆ ಪೋಷಕರಿಗೆ ಕಿರುಕುಳ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರಾಜೀವ್ ನಗರದ ಬಳಿಯ ಅಮೃತನಗರದಲ್ಲಿ  ಫೆ.13ರಂದು ಮನೆಯ ಮುಂದೆ ಆಟವಾಡುತ್ತಿದ್ದ  ಆಲಿಯಾ ಕೌಷರ್ ಗೆ  ಅನ್ಸರ್  ಕಾರಿನಿಂದ ಡಿಕ್ಕಿ ಹೊಡೆದಿದ್ದ ಎನ್ನಲಾಗಿದೆ. ಇದರಿಂದ ಮಗುವಿನ ಪೋಷಕರು ದೂರು ದಾಖಲಿಸಿದ್ದರು.  ಇದರಿಂದ ಅಮೃತಬಡಾವಣೆಯ ಅಬ್ದುಲ್ ರಹಿಂ ಹಾಗೂ ಬಿಬಿ ಆಯೀಷಾ ದಂಪತಿಗೆ  ಕಾರು ಮಾಲಿಕರು ರಕ್ತ ಬರುವಹಾಗೆ ಥಳಿಸಿ ಕೇಸ್ ಹಿಂದೆ ಪಡೆಯುವಂತೆ ಕಿರುಕುಳ ನೀಡಿದ್ದರು ಎನ್ನಲಾಗಿದೆ.

ದೂರುದಾಖಲಾದ ಕಾರಣ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದರು. ಮೈಸೂರು ಸೌತ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್.ಎಸ್.ಎಚ್):

Leave a Reply

comments

Related Articles

error: