ಸುದ್ದಿ ಸಂಕ್ಷಿಪ್ತ

ಜ.13 ದೋಷಪೂರಿತ ಪಹಣಿ ತಿದ್ದುಪಡಿ ಆಂದೋಲನ

ಮಂಡ್ಯ (ಜ.10): ಕಂದಾಯ ಇಲಾಖೆಯು ಜನವರಿ 13 ರಂದು ಗ್ರಾಮವಾರು ಅಥವಾ ಸರ್ಕಲ್‍ವಾರು ಪಹಣಿ ತಿದ್ದಪಡಿ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ.

ಪಹಣಿಗಳನ್ನು ಆಕಾರ್ ಬಂದ್‍ನೊಂದಿಗೆ ಪರಿಶೀಲಿಸಿದಾಗ ದೋಷಪೂರಿತವಾಗಿರುವುದು ಕಂಡು ಬಂದಿರುವುದರಿಂದ, ಅಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ತಾಲ್ಲೂಕಿನ ದುದ್ದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪಹಣಿ ತಿದ್ದುಪಡಿ ಆಂದೋಲವನ್ನು ಏರ್ಪಡಿಸಲಾಗಿದೆ.

ಪಹಣಿಗಳನ್ನು ತಿದ್ದಪಡಿ ಮಾಡಿಸಿಕೊಳ್ಳಲು ಚಾಲ್ತಿ ಪಹಣಿ, ಆಕಾರ್ ಬಂದ್, ಕೈ ಬರವಣಿಗೆ ಪಹಣಿ, ಮ್ಯೂಟೇಷನ್, ಆರ್.ಆರ್, ಟಿಪ್ಪಣಿ ಪ್ರತಿ ಹಾಗೂ ಋಣಭಾರ ಪ್ರಮಾಣ ಪತ್ರ.ದ ದಾಖಲಾತಿಗಳನ್ನು ನೀಡುವುದರ ಮೂಲಕ ಎಲ್ಲಾ ರೈತರು ತಮ್ಮ ಪಹಣಿಯನ್ನು ತಿದ್ದುಪಡಿಸಿಕೊಳ್ಳಬೇಕು ಎಂದು ಕಂದಾಯದಾಲತ್ ಅಧಿಕಾರಿಯವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: