ಕರ್ನಾಟಕ

ಸ್ವಉದ್ಯೋಗದಿಂದ ಬದುಕು ಕಟ್ಟಿಕೊಳ್ಳಬೇಕು: ಮಂಡ್ಯ ಜಿಲ್ಲಾಧಿಕಾರಿ

ಮಂಡ್ಯ (ಜ.10): ಅಡಿಕೆ ಹೊಂಬಾಳೆಗಳನ್ನು ಬಳಸಿಕೊಂಡು ಊಟಕ್ಕೆ ಉಪಯೋಗವಾಗುವಂತಹ ಅನೇಕ ಪ್ಲೇಟ್, ಸ್ಪೂನ್, ಹಾಗೂ ಜೊನ್ನೆಗಳನ್ನು ತಯಾರಿಸುವುದರ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳು ಮಂಡ್ಯ ನಗರದಲ್ಲಿ ಗುರುವಾರ, ಸ್ವ ಉದ್ಯೋಗ ಕೈಗೊಂಡಿರುವ ಕಾಂತರಾಜು ಅವರ ಗುಡಿ ಕೈಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಒಂದು ಅಡಿಕೆ ಹೊಂಬಾಳೆಯಲ್ಲಿ ಎರಡು ಡೊಡ್ಡ ಹಾಗೂ ಎರಡು ಸಣ್ಣ ಊಟದ ಪ್ಲೇಟ್‍ಗಳನ್ನು ತಯಾರಿಸುತ್ತಾರೆ. ಎಲ್ಲೆಲ್ಲಿ ಈ ರೀತಿ ಅಡಿಕೆ ಬೆಳೆಯುತ್ತಿದ್ದಾರೆ ಅಂತಹ ಕಡೆ ಯುವಕ ಯುವತಿಯರು ಸಿ.ಪಿ.ಜಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ಇತರರಿಗೂ ಕೆಲಸವನ್ನು ನೀಡುವಂತವರಾಗಬೇಕು. ಕಾಂತರಾಜು ಅವರ ಈ ಸ್ವಯಂ ಉದ್ಯೋಗ ಬೇರೆ ಜಿಲ್ಲೆಯವರಿಗೂ ಹಾಗೂ ಜಿಲ್ಲೆಯ ಇನ್ನಿತರ ತಾಲ್ಲೂಕಿನವರಿಗೂ ಮಾದರಿಯಾಗಿದೆ ಎಂದು ಹೇಳಿದರು. (ಎನ್.ಬಿ)

Leave a Reply

comments

Related Articles

error: