ಮೈಸೂರು

ವಿಭಜಕಕ್ಕೆ ಗುದ್ದಿದ ಬೈಕ್ : ಸವಾರ ಸಾವು

ಬೈಕ್ ನಲ್ಲಿ ಮದುವೆಗೆಂದು ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ರಸ್ತೆ ವಿಭಜಕಕ್ಕೆ ಗುದ್ದಿ  ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ಬಳಿ ನಡೆದಿದೆ.

ಮೃತರನ್ನು ವಿದ್ಯಾರಣ್ಯಪುರಂ ಮಹಾಲಕ್ಷ್ಮಿ ಜ್ಯೂವೆಲ್ಲರಿಯ ಮಾಲಕ ಶಂಕರ್ (30) ಎಂದು ಗುರುತಿಸಲಾಗಿದೆ. ಇವರು ತಮ್ಮ ಹೀರೋ ಹೊಂಡಾ ಸ್ಲೆಂಡರ್ ಬೈಕ್ ನಲ್ಲಿ ಗುಂಡ್ಲುಪೇಟೆಗೆ ತಮ್ಮ ಸ್ನೇಹಿತನ ಮದುವೆಗೆಂದು ತೆರಳುತ್ತಿದ್ದರು. ಈ ವೇಳೆ ನಂಜನಗೂಡಿನ ಬಳಿ ಸೇತುವೆ ಸಮೀಪ ಸಾಗುವಾಗ ಬೈಕ್ ರಸ್ತೆ ವಿಭಜಕಕ್ಕೆ ಬಡಿದಿದೆ. ಅವರು ಬೈಕ್ ನಿಂದ ಕೆಳಕ್ಕುರುಳಿದ್ದು, ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ನಂಜನಗೂಡು ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: