ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 1- 11: ಸಂಗೀತೋತ್ಸವ

ಶ್ರೀರಾಂಪುರದ ವಿವೇಕಾನಂದ ಬ್ರಾಹ್ಮಣ ಮಹಾಸಭಾ ವತಿಯಿಂದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ, ಶ್ರೀಮಹಾಗಣಪತಿ, ಶ್ರೀಗಾಯತ್ರಿದೇವಿ ದೇವಾಲಯದಲ್ಲಿ ಅಕ್ಟೋಬರ್ 1ರಿಂದ 10ರವರೆಗೆ ಸಂಜೆ 6.30ರಿಂದ 8.45ರವರೆಗೆ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ 1ರಂದು ಹರೀಶ್ ಪಾಂಡವ ಮತ್ತು ವೃಂದದವರಿಂದ 2ರಂದು, ಮಾನಸ ನಯನ ಮತ್ತು ವೃಂದ, 3ರಂದು ನಾದಯೋಗಿ ಮೈಸೂರು ವಿ.ಅಂಬಾ ಪ್ರಸಾದ್ ಮತ್ತು ವೃಂದ, 4ರಂದು ಸ್ಮಿತಾ ಶ್ರೀಕಿರಣ್ ಮತ್ತು ವೃಂದ, 5ರಂದು ಶ್ರೀರಾಮಭಟ್ಟ ಮತ್ತು ವೃಂದ, 6ರಂದು ಬಿ.ಎನ್.ಎಸ್.ಮುರಳಿ ಹಾಸನ ಮತ್ತು ವೃಂದ, 7ರಂದು ಎಂ.ಕೆ.ಸರಸ್ವತಿ ಮತ್ತು ವೃಂದ, 8ರಂದು ಎಂ.ಆರ್.ಸುಧಾ ಮತ್ತು ವೃಂದ, 9ರಂದು ಮೈಸೂರು ಜಿಲ್ಲಾ ಗಮಕ ಕಲಾ ಪರಿಷತ್ ಟ್ರಸ್ಟ್ ವತಿಯಿಂದ ಡಾ.ಜ್ಯೋತಿ ಶಂಕರ್ ನಿರ್ದೇಶನದ ಸಂಗೀತ ರೂಪಕ ದುರ್ಗಾದೇವಿ ನಮೋಸ್ತುತೇ 10ರಂದು ವಾಣಿ ಸತೀಶ್ ಮತ್ತು ವೃಂದದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

Leave a Reply

comments

Tags

Related Articles

error: