ಮೈಸೂರು

ಬ್ಯಾಂಕಿನಿಂದ ಹಣ ಡ್ರಾ ಮಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಲಿದ್ದ 62ಸಾವಿರರೂ.ಅಪಹರಿಸಿದ ಖದೀಮರು

ಮೈಸೂರು,ಜ.11:-  ಬ್ಯಾಂಕಿನಿಂದ ಹಣ ಡ್ರಾ ಮಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಕೈಲಿದ್ದ 62ಸಾವಿರ ರೂ.ನಗದು ಇದ್ದ ಬ್ಯಾಗ್ ನ್ನು ಯಾರೋ ಬೈಕ್ ಸವಾರರಿಬ್ಬರು ಅಪಹರಿಸಿದ ಘಟನೆ ಕುವೆಂಪು ನಗರದಲ್ಲಿ ನಡೆದಿದೆ.

ಮೈಸೂರಿನ ಕುವೆಂಪು ನಗರದ ನಿವಾಸಿ ಕುಮಾರಸ್ವಾಮಿ ಎಂಬವರೇ ಹಣ ಕಳೆದುಕೊಂಡವರಾಗಿದ್ದಾರೆ. ಇವರು 09/01/2020 ರಂದು ಮಧ್ಯಾಹ್ನ 1  ಗಂಟೆ ಸಮಯದಲ್ಲಿ ವಿವೇಕಾನಂದನಗರದ ಎಸ್‌ಬಿಐ ಬ್ಯಾಂಕ್‌‌ಗೆ ಹೋಗಿ ಅಲ್ಲಿ ಚೆಕ್ ಮೂಲಕ 62,000ರೂ ಹಣವನ್ನು ಡ್ರಾ ಮಾಡಿ, ತಮ್ಮ ಹ್ಯಾಂಡ್‌‌‌‌‌ ಬ್ಯಾಗ್‌‌‌‌‌‌ನಲ್ಲಿ ಇಟ್ಟುಕೊಂಡು, ರಸ್ತೆಯ ಮೂಲಕ ನಡೆದುಕೊಂಡು ಬರುತ್ತಿದ್ದಾಗ, ಮಧ್ಯಾಹ್ನ ಸುಮಾರು 1.20 ರ ಸಮಯದಲ್ಲಿ ಕುವೆಂಪುನಗರದ ಕೆಎಸ್ಆರ್‌‌‌ಟಿಸಿ ಡಿಪೊಗೆ ಹೋಗುವ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾರೋ ಅಪರಿಚಿತರಿಬ್ಬರು ಬೈಕ್ ಸವಾರರು ಕಪ್ಪು ಬಣ್ಣದ ಬೈಕ್‌‌‌‌ನಲ್ಲಿ   ಮುಂಭಾಗದಿಂದ ಬಂದು ಎಡಭಾಗದ ಕೈನಲ್ಲಿದ್ದ ಬ್ಯಾಗ್ ನ್ನು ಕಿತ್ತುಕೊಂಡು  ದೂರಿನಲ್ಲಿ ತಿಳಿಸಿದ್ದಾರೆ.

ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿ ಕ್ಯಾಮರಾ ಫೂಟೇಜ್ ಮೂಲಕ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: