ದೇಶಪ್ರಮುಖ ಸುದ್ದಿ

ಜಿಎಸ್ಟಿಗೆ ಸಿಗುವುದೇ ಸಂಸತ್ ಒಪ್ಪಿಗೆ; ಇಂದಿನಿಂದ ಅಧಿವೇಶನ ಆರಂಭ

ನವದೆಹಲಿ : ಇಂದಿನಿಂದ ಆರಂಭಗೊಂಡಿರುವ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗದ ಕಲಾಪದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆಗೆ ಒಪ್ಪಿಗೆ ಪಡೆಯುವ ನಿರೀಕ್ಷೆಯಲ್ಲಿದೆ ಕೇಂದ್ರ ಸರ್ಕಾರ.

ಸದನದಲ್ಲಿ ಆರೋಗ್ಯಕರ ಚರ್ಚೆ ನಡೆಯುವುದನ್ನು ನಿರೀಕ್ಷಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದು, ಜಿಎಸ್ಟಿ ಮಸೂದೆ ಪ್ರಕ್ರಿಯೆ ಈ ಅಧಿವೇಶನದಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸವಿದೆ. ಅಧಿವೇಶನದಲ್ಲಿ ಜನತೆಗೆ ಉಪಯೋಗವಾಗುವ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಈ ಬಾರಿಯ ಕಲಾಪದಲ್ಲಿ ಗುಣಮಟ್ಟದ ಚರ್ಚೆಗಳು ನಡೆಯಲಿದ್ದು, ಬಡಜನತೆಗೆ ಸಂಬಂಧಪಟ್ಟ ವಿಷಯಗಳ ಚರ್ಚೆಗೆ ಒತ್ತು ನೀಡಲಾಗುವುದು. ಬಜೆಟ್ ಅಧಿವೇಶನದ ಮೊದಲ ಅವಧಿಯ ಕಲಾಪ ಜನವರಿ 31 ರಂದು ಆರಂಭವಾಗಿ ಫೆಬ್ರವರಿ 9 ರಂದು ಮುಕ್ತಾಯಗೊಂಡಿತ್ತು. ಈ ಸಂದರ್ಭ ಕೇಂದ್ರ ಬಜೆಟ್ ಮಂಡಿಸಿ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸಿ ಮುಂದೂಡಲಾಯಿತು ಎಂದು ಪ್ರಧಾನಿ ಹೇಳಿದರು.

Leave a Reply

comments

Related Articles

error: