ಮನರಂಜನೆ

ನಟಿಸುವಾಗಲೂ ನಿರ್ಮಾಪಕನಂತೆ ಯೋಚಿಸುತ್ತೇನೆ : ಬಾಲಿವುಡ್ ಸಿಂಗಮ್ ಅಜಯ್ ದೇವಗನ್

ದೇಶ(ನವದೆಹಲಿ)ಜ.11:- ನಟ-ನಿರ್ಮಾಪಕ ಅಜಯ್ ದೇವಗನ್ ಅವರ ಪಾದಗಳು ಇತ್ತೀಚಿನ ದಿನಗಳಲ್ಲಿ ನೆಲದ ಮೇಲೆ ನಿಲ್ಲುತ್ತಿಲ್ಲ. ಅವರ ವೃತ್ತಿಜೀವನದ 100 ನೇ ಚಿತ್ರ ‘ತಾನಾಜಿ: ದಿ ಅನ್ಸಂಗ್ ವಾರಿಯರ್’ ಬಿಡುಗಡೆಯಾಗಿದೆ.

ಓರ್ವ ನಟ ಯೋಚಿಸುತ್ತಾನೆ. ಚಿತ್ರಕ್ಕಾಗಿ ಹೃದಯಬಿಚ್ಚಿ ಖರ್ಚು ಮಾಡಬೇಕೆಂದು. ಆದರೆ ಓರ್ವ ನಿರ್ಮಾಪಕ ಹಾಸಿಗೆ ಇದ್ದಷ್ಟೇ ಕಾಲುಚಾಚಬೇಕೆಂದು ಬಯಸುತ್ತಾನೆ. ಆದರೆ ನೀವು ಎರಡರ ನಡುವೆ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳುತ್ತೀರೆಂಬ ಪ್ರಶ್ನೆಗೆ ಪ್ರಯಿಕ್ರಿಯಿಸಿ ನನ್ನ ವಿಷಯದಲ್ಲಿ ಇದು ವಿರುದ್ಧವಾದ ಮಾತು ನಿಜ. ನಿರ್ಮಾಪಕರಾಗಿ, ನಾನು ಸಾಧ್ಯವಾದಷ್ಟು ಖರ್ಚು ಮಾಡಲು ಪ್ರಯತ್ನಿಸುತ್ತೇನೆ. ಇದು ಕೇವಲ ಹಣದ ಬಗ್ಗೆ ಅಲ್ಲ. ತಾನಜಿಯಂತಹ ದೊಡ್ಡ ಚಿತ್ರ ಮಾಡಲು ಸಾಕಷ್ಟು ತಿಳುವಳಿಕೆ, ತಾಂತ್ರಿಕ ಜ್ಞಾನ ಬೇಕು. ಈ ಚಿತ್ರದ ಬಜೆಟ್ ಯಾವುದೇ ದೊಡ್ಡ ಚಿತ್ರಗಳಿಗಿಂತ ಹೆಚ್ಚಿಲ್ಲ. ಆದರೆ ಈ ಚಿತ್ರದ ವಿಶೇಷ ಪರಿಣಾಮಗಳನ್ನು ನೀವು ಗಮನಿಸಿದರೆ, ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಅನಿಸುತ್ತದೆ. ಏಕೆಂದರೆ ನಾವು ಕಳೆದ ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ.

ನಾನು ವಿಎಫ್‌ಎಕ್ಸ್ ಕಂಪನಿಯನ್ನೂ  ಹೊಂದಿದ್ದೇನೆ. ಚಿತ್ರದ ಚಿತ್ರೀಕರಣ ಹೇಗೆ ಮಾಡಬೇಕೆಂದು ನಾಲ್ಕು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಈ ಕುರಿತು ಸಾಕಷ್ಟು ಶ್ರಮ ವಹಿಸಲಾಗಿದೆ. ಹಣವಿದ್ದರೆ ಯಾರಾದರೂ ಚಿತ್ರ ಮಾಡಬಹುದು. ನಿಮ್ಮ ಬಳಿ ಎರಡು ಸಾವಿರ ಕೋಟಿ ರೂಪಾಯಿಗಳಿದ್ದರೆ, ನೀವು ಯಾವುದೇ ಹಾಲಿವುಡ್ ಚಿತ್ರಕ್ಕೆ ಸಮಾನವಾದ ಚಿತ್ರವನ್ನು ಮಾಡಬಹುದು ಎಂದಿದ್ದಾರೆ.

ಈ ಚಿತ್ರದ ವಿಶೇಷಎಗಳು ಹಾಲಿವುಡ್ ಚಿತ್ರಗಳ ವಿಶೇಷತೆಗಳಿಗಿಂತ  ಯಾವುದೇ ರೀತಿಯಲ್ಲಿ ಕೆಳಮಟ್ಟದಲ್ಲಿಲ್ಲ ಎಂದು ನನಗೆ ಹೆಮ್ಮೆ ಇದೆ. ಇದರಲ್ಲಿ ಬಳಸಲಾದ 3 ಡಿ ತಂತ್ರಜ್ಞಾನ ಮತ್ತು ವಿಎಫ್‌ಎಕ್ಸ್ ಈ ಮೊದಲು ಯಾವುದೇ ಭಾರತೀಯ ಚಲನಚಿತ್ರದಲ್ಲಿ ಮಾಡಿಲ್ಲ ಎಂದಿದ್ದಾರೆ.

ನೀವು ಎಂದಾದರೂ ನಟನಾಗಿ ಹೆಚ್ಚಿನದನ್ನು ಮತ್ತು ನಿರ್ಮಾಪಕರಾಗಿ ಏನನ್ನಾದರೂ ಬಯಸಿದ್ದೀರಾ ಎಂದಿದ್ದಕ್ಕೆ ಎಂದಿಗೂ ನಾನು ನಟನಾಗಿ ನಾನೂ ಸಹ ನಿರ್ಮಾಪಕನಂತೆ ಯೋಚಿಸುತ್ತೇನೆ. ಯಾವುದೇ ಸಂಪನ್ಮೂಲಗಳ ನಷ್ಟ   ತಪ್ಪಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ನಾನು ಈ ಮನೋಭಾವವನ್ನು ನಾನು ನಿರ್ಮಿಸುತ್ತಿರುವ ಚಿತ್ರಗಳಲ್ಲಿ ಮಾತ್ರವಲ್ಲ, ಇತರರು ನಿರ್ಮಿಸುವ ಚಿತ್ರಗಳಲ್ಲಿಯೂ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: