ಮೈಸೂರು

ಎಡಿಜಿಪಿ ಅಲೋಕ್ ಮೋಹನ್ ಮೈಸೂರಿಗೆ ಭೇಟಿ : ಠಾಣಾಧಿಕಾರಿಗಳೊಂದಿಗೆ ಚರ್ಚೆ

ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಮೋಹನ್ ಮೈಸೂರಿಗೆ ಗುರುವಾರ ಭೇಟಿ ನೀಡಿದರು.

ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಮೋಹನ್ ಗುರುವಾರ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಅವರ ಕಚೇರಿಗೆ ಭೇಟಿ ನೀಡಿ ಮೈಸೂರು ಜಿಲ್ಲೆಯ ಎಲ್ಲ ಠಾಣಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇಲ್ಲಿನ ಕಾನೂನು ಸುವ್ಯವಸ್ಥೆ ಹೇಗಿದೆ. ನೀವು ಯಾವ ರೀತಿ ಕ್ರಮಗಳನ್ನು ಕೈಗೊಂಡಿದ್ದೀರಿ, ರೌಡಿಶೀಟರ್ ಗಳನ್ನು ನಿಗ್ರಹಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರಿ, ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಅವರನ್ನು ಕಾನೂನಿನ ಸುಪರ್ದಿಗೆ ಒಪ್ಪಿಸಲು ನೀವೇನು ಕ್ರಮಗಳನ್ನು ಕೈಗೊಂಡಿದ್ದೀರಿ ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭ ಠಾಣಾಧಿಕಾರಿಗಳು ತಾವು ಕೈಗೊಂಡಿರುವ ಕ್ರಮಗಳನ್ನು ಎಡಿಜಿಪಿಯವರಲ್ಲಿ ವಿವರಿಸಿದರು. ಎಡಿಜಿಪಿಯವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾಹಿತಿಗಳನ್ನು ನೀಡಿದರು.

ಈ ಸಂದರ್ಭ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಡಿಸಿಪಿಗಳಾದ ಶೇಖರ್, ರುದ್ರಮುನಿ ಸೇರಿದಂತೆ ಹದಿನೆಂಟು ಠಾಣಾಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್.ಎಸ್.ಎಚ್) ಚಿತ್ರ: ಹಂಪಾನಾ

Leave a Reply

comments

Related Articles

error: