ಕರ್ನಾಟಕ

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಡ್ಯ (ಜ.13): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯೀಕಿಯ ಚಿಕಿತ್ಸೆ, ಪೊಲೀಸ್ ನೆರವು ಹಾಗೂ ಆಪ್ತ ಸಮಾಲೋಚನಾ ವ್ಯವಸ್ಥೆಗಳನ್ನು ಒದಗಿಸುವ ಸಲುವಾಗಿ ಸಖಿ ಒನ್‍ಸ್ಟಾಪ್ ಸೆಂಟರ್ ಘಟಕಕ್ಕೆ ಗೌರವಧನ ಆಧಾರಿತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಘಟಕ ಆಡಳಿತಾಧಿಕಾರಿ 1 ಹುದ್ದೆ, ಸಮಾಲೋಚಕರು 1, ಸಮಾಜ ಸೇವಾ ಕಾರ್ಯಕರ್ತರು/ ಕೇಸ್ ವರ್ಕರ್ 2 ಹುದ್ದೆ, ವಕೀಲರು(ಪ್ಯಾರಾ ಲೀಗಲ್ ಹುದ್ದೆ)ಗೆ 2 ಹಾಗೂ ಸ್ವಚ್ಛತಾಗಾರರು/ಸೆಕ್ಯೂರಿಟಿ 2 ಹುದ್ದೆ ಸೇರಿ ಒಟ್ಟು 8 ಹುದ್ದೆಗಳು ಇವೆ. ಅರ್ಜಿ ಸಲ್ಲಿಸುವವರು ಎಂಎಸ್‍ಡಬ್ಲ್ಯೂ, ಸ್ನಾತಕೋತ್ತರ ಕಾನೂನು ಪದವಿ, ಎಂಎಸ್‍ಸಿ ಹೋಂ ಸೈನ್ಸ್ (ಹ್ಯೂಮನ್ ಡೆವಲಪ್‍ಮೆಂಟ್ ಅಂಡ್ ಫ್ಯಾಮಿಲಿ ರಿಲೇಷನ್) ಎಂಎಸ್ಸಿ ಸೈಕಾಲಿಜಿ, ಎಂಎಸ್‍ಸಿ ಸೈಕಿಯಾಟ್ರಿ, ಬಿಎಸ್‍ಡಬ್ಲ್ಯೂ, ಬಿ.ಎ ಸೋಷಿಯಾಲಜಿ ಹಾಗೂ ಮಹಿಳಾ ಅಧ್ಯಯನದಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವವರು ಮಹಿಳೆಯರಾಗಿದ್ದು, ವೃತ್ತಿಯಲ್ಲಿ ಅನುಭವ ಹೊಂದಿರಬೇಕು. ಅರ್ಜಿಯನ್ನು ಜನವರಿ 20ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪಡೆದು ಜನವರಿ 29 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಇಲಾಖೆಯ ಉಪನಿರ್ದೇಶಕರಿಗೆ ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; 08232-227336/221315 ಮೂಲಕ ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: