ಮನರಂಜನೆಮೈಸೂರು

ಮೈಸೂರಿನಲ್ಲಿ ಕಿಚ್ಚ ಸುದೀಪ್

ಮೈಸೂರಿನಲ್ಲಿ ಹೆಬ್ಬುಲಿಯ ಗರ್ಜನೆ ಕೇಳಿ ಬಂದಿದೆ. ಯಾಕಂತ ಕೇಳುತ್ತಿದ್ದೀರಾ?  ಹೆಬ್ಬುಲಿ  ಚಿತ್ರದ ನಾಯಕ ಸುದೀಪ್ ಮೈಸೂರಿಗಾಗಮಿಸಿದ್ದಾರೆ. ಭಾರೀ ನೀರೀಕ್ಷೆಯೊಂದಿಗೆ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ‌ ಚಿತ್ರ ಬಾಕ್ಸ್ ಆಫೀಸ್ ನಲ್ಲಿ‌ ಧೂಳ್ ಎಬ್ಬಿಸಿದೆ.

ಬಾಕ್ಸ್  ಆಫೀಸ್ ನ್ನು ಧೂಳೆಬ್ಬಿಸುತ್ತಿದ್ದಂತೆ ಕಿಚ್ಚ ಸುದೀಪ್ ಇದೀಗ ಕರ್ನಾಟಕದಲ್ಲಿ ತಮ್ಮ  ಸವಾರಿಯನ್ನು ಆರಂಭಿಸಿದ್ದಾರೆ. ಈ ಪ್ರಯುಕ್ತ  ಗುರುವಾರ ಮೈಸೂರಿನ ಸಂಗಮ್ ಚಿತ್ರ ಮಂದಿರಕ್ಕೆ ಭೇಟಿ‌ ನೀಡಿದರು. ಈ ವೇಳೆ‌ ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ನನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಈ ವೇಳೆ‌ ಜನರನ್ನು ನಿಯಂತ್ರಿಸಲು‌ ಪೊಲೀಸರು ಹರಸಾಹಸ ಪಡಬೇಕಾಯಿತು. ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆಗೂಡಿ ಚಿತ್ರವನ್ನು ವೀಕ್ಷಿಸಿದರಲ್ಲದೇ ಪ್ರೇಕ್ಷಕರತ್ತ ಕೈಬೀಸಿದರು. ಕಿಚ್ಚ ಸುದೀಪ್ ಪರ ಜೈಕಾರಗಳು ಮೊಳಗಿದವು.

ದರ್ಶನ್  ಕುರಿತಂತೆ ಮಾಧ್ಯಮದ ಪ್ರಶ್ನೆಗಳಿಗೆ ಮುಗುಳ್ನಕ್ಕ ಕಿಚ್ಚ ಸುದೀಪ್ ಕೈ ಮುಗಿದು ವಾಪಸ್ ಆದರು. ಚಿತ್ರದ ಸಕ್ಸಸ್‌ ಕುರಿತು ಮಾತನಾಡಿದ ಸುದೀಪ್, ಮುಂದಿನ ದಿನದಲ್ಲಿ ಯೋಧರ ಕುರಿತು ಚಿತ್ರ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು. ಹೆಬ್ಬುಲಿ ಚಿತ್ರದ ಮೇಲೆ ನಾವು ನಂಬಿಕೆ ಇಟ್ಟಿದ್ದೆವು. ಜನರು ನಮ್ಮ ಚಿತ್ರದ ಮೇಲೆ ನಂಬಿಕೆಯಿರಿಸಿ ವೀಕ್ಷಿಸಿದ್ದಾರೆ‌ ಹಾಗಾಗಿ ಚಿತ್ರ ಗೆದ್ದಿದೆ ಎಂದರು. ಬರದ ನಡುವೆ ತುಂಬಾ ವೆಚ್ಚದ ಚಿತ್ರವಿದ್ದ ಹಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಜನರಿಗೋಸ್ಕರ ಚಿತ್ರ ಚೆನ್ನಾಗಿ ಮೂಡಿ‌ ಬರಲು ಅದ್ದೂರಿ ವೆಚ್ಚದ ಅವಶ್ಯಕತೆ ಇತ್ತು. ಹಾಗಾಗಿ ನಮ್ಮ ಹೆಬ್ಬಲಿ ಚಿತ್ರ ಇವತ್ತು ಈ ರೀತಿ ಮುನ್ನುಗ್ಗುತ್ತಿದೆ ಎಂದರು.

( ಎಸ್.ಎನ್.ಎಸ್.ಎಚ್)

 

Leave a Reply

comments

Related Articles

error: