ಮೈಸೂರು

ಭಾನವಿ ಆಸ್ಪತ್ರೆ ಸಂಸ್ಥಾಪಕ ನರಸೇಗೌಡರ 77ನೇ ಹುಟ್ಟುಹಬ್ಬದ ಅಂಗವಾಗಿ ಜ.14ರಂದು ವಿವಿಧ ಕಾರ್ಯಕ್ರಮ

ಮೈಸೂರು,ಜ.13:- ಭಾನವಿ ಆಸ್ಪತ್ರೆ ಸಂಸ್ಥಾಪಕ ನರಸೇಗೌಡರ 77ನೇ ಹುಟ್ಟುಹಬ್ಬದ ಅಂಗವಾಗಿ ಜ.14ರಂದು   ಭಾನವಿ ಆಸ್ಪತ್ರೆ ಆವರಣದಲ್ಲಿ  ನೂತನ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಶ್ವಾಸಕೋಶ ಘಟಕದ ಉದ್ಘಾಟನೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಭಾನವಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ವಿಜಯ್ ಚಲುವರಾಜ್ ಮಾಹಿತಿ ನೀಡಿ  ಪಾಲಿಕೆ ಸದಸ್ಯ ರವಿಕುಮಾರ್  ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರತಿ ವರ್ಷವೂ ಹೊಸ ಹೊಸ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ಭಾನವಿ ಆಸ್ಪತ್ರೆ ಅಳವಡಿಸಿಕೊಳ್ಳುತ್ತಿದೆ. ಮೈಸೂರಿನ ನಾಗರೀಕರಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಯ ಸಂಸ್ಥಾಪಕರ ಹುಟ್ಟುಹಬ್ಬದ ಪ್ರಯುಕ್ತ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: