ಕ್ರೀಡೆಮನರಂಜನೆ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ಗೆ ದೊಡ್ಡ ಹಿನ್ನಡೆ : ಅನುಭವಿ ಆಟಗಾರ ಪ್ರವೀಣ್ ತಾಂಬೆ ನಿಷೇಧ

ದೇಶ(ನವದೆಹಲಿ)ಜ.13:-  ಬಾಲಿವುಡ್ ಕಿಂಗ್ ಖಾನ್ ಶಾರುಖ್  ಅವರ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ಗೆ ದೊಡ್ಡ ಹಿನ್ನಡೆಯುಂಟಾಗಿದೆ.  ಅವರ ಅನುಭವಿ ಆಟಗಾರ 48 ವರ್ಷದ ಪ್ರವೀಣ್ ತಾಂಬೆ ಅವರನ್ನು ನಿಷೇಧಿಸಲಾಗಿದೆ.

ಅವರು ಇನ್ನು ಮುಂದೆ ಐಪಿಎಲ್‌ನ 13 ನೇ ಸೀಸನ್  ಆಡಲು ಸಾಧ್ಯವಾಗುವುದಿಲ್ಲ. ಕಳೆದ ವರ್ಷ ಡಿಸೆಂಬರ್ 19 ರಂದು ನಡೆದ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅವರನ್ನು 20 ಲಕ್ಷ ರೂ.ಗಳ ಮೂಲ ಬೆಲೆಗೆ ಖರೀದಿಸಿತ್ತು. ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಹಳೆಯ ಆಟಗಾರ ಎಂಬ ಹೆಗ್ಗಳಿಕೆಗೂ ತಾಂಬೆ ಪಾತ್ರರಾದರು. ವಾಸ್ತವವಾಗಿ, ಪ್ರವೀಣ್ ತಂಬೆ ಕಳೆದ ವರ್ಷ ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆದ ಟಿ 10 ಲೀಗ್‌ನಲ್ಲಿ ಭಾಗವಹಿಸಿದ್ದರಿಂದ ಐಪಿಎಲ್ 13 ಆಡಿದ್ದಕ್ಕಾಗಿ ಅವರನ್ನು ನಿಷೇಧಿಸಲಾಗಿದೆ.

ಪ್ರವೀಣ್ ತಾಂಬೆ ಟಿ 10 ಲೀಗ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ್ದರು.  ಓಯೆನ್ ಮೋರ್ಗಾನ್, ಕೀರನ್ ಪೊಲಾರ್ಡ್ ಮತ್ತು ಫ್ಯಾಬಿಯನ್ ಅಲೆನ್‌ರಂತಹ ಪ್ರಸಿದ್ಧ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ಗೆ ದಾರಿ ತೋರಿಸಿದರು. ಇದು ಮಾತ್ರವಲ್ಲ, ಈ ಮೂವರಲ್ಲದೆ, ಅವರು ಕ್ರಿಸ್ ಗೇಲ್ ಮತ್ತು ಉಪುಲ್ ತರಂಗಾ ಅವರನ್ನೂ  ಗುರಿಯಾಗಿಸಿದ್ದರು. ಈ ಪಂದ್ಯದಲ್ಲಿ ತಾಂಬೆ 2 ಓವರ್‌ಗಳಲ್ಲಿ 15 ರನ್‌ಗಳಿಗೆ 5 ವಿಕೆಟ್ ಕಬಳಿಸಿದ್ದರು. ಬಿಸಿಸಿಐ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಭಾರತೀಯ ಆಟಗಾರನು ನಿವೃತ್ತಿಯಿಲ್ಲದೆ ವಿಶ್ವದ ಯಾವುದೇ ಲೀಗ್‌ನಲ್ಲಿ ಆಡಲು ಸಾಧ್ಯವಿಲ್ಲ ಎನ್ನಲಾಗಿದೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: