ಪ್ರಮುಖ ಸುದ್ದಿ

ಎಲ್ಲರಿಗೂ ಸಚಿವ ಸ್ಥಾನ ನೀಡದಿದ್ದರೆ ಮುಂದೆ ಕಾದು ನೋಡಿ : ಹೊಸಬಾಂಬ್ ಸಿಡಿಸಿದ ಮಾಜಿ ಸಚಿವ ಹೆಚ್.ವಿಶ್ವನಾಥ್

ರಾಜ್ಯ(ರಾಯಚೂರು)ಜ.13:-  ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಯ. ನಮಗೆ ಸಚಿವ ಸ್ಥಾನ ನೀಡದಿದ್ದರೇ ಮುಂದೆ ಕಾದು ನೋಡಿ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೊಸಬಾಂಬ್ ಹಾಕಿದ್ದಾರೆ.

ರಾಯಚೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ಸಿಎಂ ಏನೇ ಹೇಳಿದ್ರೂ ಸಚಿವ ಸ್ಥಾನ ಕೇಳೋದು ನಮ್ಮ ಕೆಲಸ. ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಯ. ಇವತ್ತು ಏನಾಗುತ್ತೆ ನಾಳೆ ಏನಾಗುತ್ತೆ ಎಂದು ಹೇಗೆ ಹೇಳಲಿ ಎಂದರು.

ಬಿಎಸ್ ವೈ ಸಿಎಂ ಆಗಲು 17 ಮಂದಿಯೂ ತ್ಯಾಗ ಮಾಡಿದ್ದೇವೆ. ಬಿಎಸ್ ವೈ ಸಿಎಂ ಆಗಲು ಸಹಕಾರ ಕೊಟ್ಟಿದ್ದೇವೆ. ಇನ್ನೊಂದೆಡೆ ಅಸಂವಿಧಾನಕವಾಗಿದ್ದ ಸಮ್ಮಿಶ್ರ ಸರ್ಕಾರ ತೊಲಗಿಸಿದ್ದೇವೆ. ನಮಗೆ ಸಚಿವ ಸ್ಥಾನ ನೀಡದಿದ್ದರೇ ಮುಂದೆ ಕಾದು ನೋಡಿ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: