ಪ್ರಮುಖ ಸುದ್ದಿ

ಎಮ್ಮೆಮಾಡು ಸರ್ಕಾರಿ ಶಾಲೆಗೆ ಶಿಕ್ಷಕರ ನೇಮಕ

ರಾಜ್ಯ(ಮಡಿಕೇರಿ) ಜ.14 :- ತಾಲ್ಕೂಕಿನ ಎಮ್ಮೆಮಾಡು ಸರ್ಕಾರಿ ಶಾಲೆ ಶಿಕ್ಷಕರ ಕೊರತೆಯ ಬಗ್ಗೆ ಮಾಧ್ಯಮಗಳಲ್ಲಿ ಬೆಳಕು ಚೆಲ್ಲಲಾಗಿತ್ತು. ಸದ್ಯ ಪ್ರಸಕ್ತ ವರ್ಷ ಎಮ್ಮೆಮಾಡು ಶಾಲೆಗೆ ಗಣಿತ ವಿಷಯ ಭೋದಿಸುವ ಶಿಕ್ಷಕರು ವರ್ಗಾವಣೆಗೊಂಡು ಅಕ್ಟೋಬರ್ ತಿಂಗಳಿನಲ್ಲಿ ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಕನ್ನಡ ಮತ್ತು ಗಣಿತ ವಿಷಯಕ್ಕೆ ಖಾಯಂ ಶಿಕ್ಷಕರಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಸುಕ್ರುಗೌಡ ಅವರು ತಿಳಿಸಿದ್ದಾರೆ.

ಖಾಲಿಯಾಗಿರುವ ಆಂಗ್ಲ ಭಾಷಾ ವಿಷಯಕ್ಕೆ ಅತಿಥಿ ಶಿಕ್ಷಕರಿದ್ದಾರೆ. ದೈಹಿಕ ಶಿಕ್ಷಣಕ್ಕೆ 2 ಶಿಕ್ಷಕರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜ ವಿಷಯಕ್ಕೆ ಜನವರಿ 9 ರಿಂದ ಶಿಕ್ಷಕರು ನಿಯೋಜನೆ ಮೇರೆಗೆ ವಾರದ 6 ದಿನ ಕರ್ತವ್ಯ ನಿರ್ವಹಿಸಲಿದ್ದಾರೆ. ಹಿಂದಿ ವಿಷಯಕ್ಕೆ ವಾರದಲ್ಲಿ 2 ದಿನ ಡಿಸೆಂಬರ್ 13 ರಿಂದ ಹಾಗೂ ವಿಜ್ಞಾನ ವಿಷಯಕ್ಕೆ ಜನವರಿ 13 ರಿಂದ ವಾರದಲ್ಲಿ 2 ದಿನ ನಿಯೋಜನೆ ಮೇರೆಗೆ ಕೆಲಸ ನಿರ್ವಹಿಸುತ್ತಿದ್ದಾರೆ.

ಆದ್ದರಿಂದ ಪ್ರಸ್ತುತ ಜನವರಿ 13 ರಿಂದ ಎಲ್ಲಾ ವಿಷಯಕ್ಕು ಶಿಕ್ಷಕರು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಎಲ್ಲಾ ವಿಷಯಕ್ಕು ಶಿಕ್ಷಕರ ಲಭ್ಯತೆ ಇದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಸುಕ್ರುಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: