ದೇಶಪ್ರಮುಖ ಸುದ್ದಿ

ಜಮ್ಮು-ಕಾಶ್ಮೀರ: ಹಿಮದಲ್ಲಿ ಸಿಲುಕಿದ್ದ ಯೋಧ ನಾಪತ್ತೆ

ನವದೆಹಲಿ,ಜ.14-ಜಮ್ಮು ಕಾಶ್ಮೀರದ ಗುಲ್ ಮಾರ್ಗ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆಯ ಬಳಿ ಹಿಮದಲ್ಲಿ ಸಿಲುಕಿದ ಯೋಧರೊಬ್ಬರು ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ.

ಗರ್ವಾಲ್ ರೈಫಲ್ಸ್ ರೆಜಿಮೆಂಟ್ ಗೆ ಸೇರಿದ ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ ಗಸ್ತು ತಿರುಗುತ್ತಿದ್ದ ವೇಳೆ ಹಿಮದಲ್ಲಿ ಸಿಲುಕಿದ್ದಾರೆ.

ಕಾಣೆಯಾದ ಸೈನಿಕನನ್ನು ಪತ್ತೆಹಚ್ಚಲು ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಗುಲ್ ಮಾರ್ಗ್ ಸೆಕ್ಟರ್ ನಲ್ಲಿ ಭಾರೀ ಹಿಮಪಾತವಾಗುತ್ತಿದ್ದು ರಕ್ಷಣಾ ಕಾರ್ಯಕ್ಕೆ ತೊಡಕಾಗುತ್ತಿದೆ.

2002 ರಿಂದ ಭಾರತೀಯ ಸೇನೆಯ 11ನೇ ಗರ್ವಾಲ್ ರೈಫಲ್ಸ್ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ನೇಗಿ, ಮೂಲತಃ ಉತ್ತರಕಾಂಡದ ಡೆಹ್ರಡೂನ್ ನವರು. (ಎಂ.ಎನ್)

 

Leave a Reply

comments

Related Articles

error: