ಮೈಸೂರು

ಕಾಡಾನೆ  ದಾಳಿಗೆ  ಹಸು  ಬಲಿ : ಹನಗೋಡಿನ ಹೆಬ್ಬಾಳದಲ್ಲಿ ಘಟನೆ

ಮೈಸೂರು,ಜ.14:- ನಾಗರಹೊಳೆ  ರಾಷ್ಟ್ರೀಯ  ಉದ್ಯಾನವನದಂಚಿನ  ಹುಣಸೂರು ತಾಲೂಕು ಹನಗೋಡು  ಬಳಿಯ  ಹೆಬ್ಬಾಳ  ಗ್ರಾಮದಲ್ಲಿ  ನಿನ್ನೆ  ರಾತ್ರಿ   ವ್ಯಕ್ತಿಯೋರ್ವರಿಗೆ ಸೇರಿದ  ಹಸುವಿನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಹಸು ಸಾವನ್ನಪ್ಪಿದೆ.

ಹೆಬ್ಬಾಳ  ಗ್ರಾಮದ  ವೆಂಕಟೇಶ್ ಶೆಟ್ಟಿ  ಎಂಬವರಿಗೆ  ಸೇರಿದ  ಹಸು ಇದಾಗಿದ್ದು,  ಸುಮಾರು  60 ಸಾವಿರ  ಬೆಲೆ  ಬಾಳಲಿದೆ.  ಮನೆ  ಮುಂದೆ  ಕಟ್ಟಿದ  ಹಸುವಿನ  ಮೇಲೆ ಏಕಾ ಏಕಿ   ಕಾಡಾನೆ ದಾಳಿ ನಡೆಸಿದೆ. ನಾಗರಹೊಳೆ  ರಾಷ್ಟ್ರೀಯ  ಉದ್ಯಾನವನ ದಂಚಿನ ಕಿಕ್ಕೇರಿ  ಕಟ್ಟೆ  ಭಾಗದ  ಕಲ್ಲುಮಂಟಿ ಭಾಗದಿಂದ  ಕಾಡಾನೆ ದಾಟಿ ಬಂದಿದ್ದು, ಸ್ಥಳಕ್ಕೆ  ಅರಣ್ಯ  ಇಲಾಖೆ  ಸಿಬ್ಬಂದಿಗಳು  ಭೇಟಿ  ನೀಡಿ   ಪರಿಶೀಲನೆ ನಡೆಸಿದ್ದಾರೆ.

ಗ್ರಾಮಸ್ಥರ  ಆಕ್ರೋಶ

ಹಲವಾರು ವರ್ಷಗಳಿಂದ  ಈ  ಭಾಗದಲ್ಲಿ  ಕಾಡಾನೆಗಳ  ಹಾವಳಿ  ಹೆಚ್ಚಾಗಿದ್ದು  ಕಾಡಾನೆ ಹಾವಳಿ  ತಪ್ಪಿಸಲು  ಅರಣ್ಯ  ಇಲಾಖೆ  ವಿಫಲವಾಗಿದೆ. ಇದಲ್ಲದೆ  ಕಳೆದ  ಲೋಕಸಭಾ  ಹಾಗೂ  ವಿಧಾನ ಸಭಾ  ಚುನಾವಣೆಯನ್ನು  ಗ್ರಾಮಸ್ಥರು  ಬಹಿಷ್ಕಾರ ಮಾಡಿದ್ದಾಗ  ತಾಲೂಕು  ಹಾಗೂ  ಜಿಲ್ಲಾಡಳಿತ  ಕಾಡಾನೆ  ಹಾವಳಿ  ತಪ್ಪಿಸುವ  ಭರವಸೆ ನೀಡಿತ್ತು.  ಇನ್ನೂ  ಇತ್ತ  ಯಾರೂ  ಗಮನ ಹರಿಸಿಲ್ಲವೆಂದು  ಗ್ರಾಮಸ್ಥರು ಹಾಗೂ  ಗ್ರಾ. ಪ  ಮಾಜಿ  ಸದಸ್ಯ  ಒ.ಕೆ.ಚಂದ್ರಶೇಖರ  ಆರೋಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: